ಪಂಜಾಬ್: ಆಮ್ ಆದ್ಮಿ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗವಾಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಂಸದ ರಾಘವ್ ಚಡ್ಡಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರು "ಸಂಪೂರ್ಣವಾಗಿ ರಾಜಿ ಮಾಡಿಕೊಂಡಿದ್ದಾರೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್, ಪಕ್ಷದ ಸದ್ಯದ ಪರಿಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. "ಒಂದೆಡೆ ಪಕ್ಷದ ಮತಗಳು ಕುಸಿಯುತ್ತಿವೆ, ಗುಜರಾತ್‌ನಲ್ಲಿ ನಮ್ಮ ಕಾರ್ಯಕರ್ತರು ಜೈಲು ಪಾಲಾಗುತ್ತಿದ್ದಾರೆ ಮತ್ತು ಪಂಜಾಬ್‌ಗೆ ಬರಬೇಕಾದ ಹಣಕಾಸಿನ ಅನುದಾನಗಳು ಸಿಕ್ಕಿಹಾಕಿಕೊಂಡಿವೆ. ಇಂತಹ ಗಂಭೀರ ವಿಷಯಗಳ ಬಗ್ಗೆ ಗಮನ ಹರಿಸುವ ಬದಲು, ಚಡ್ಡಾ ಅವರು ಸಮೋಸಾಗಳ ಬಗ್ಗೆ ಮಾತನಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದರು.
ರಾಘವ್ ಚಡ್ಡಾ ಅವರು ಇತರ ಶಕ್ತಿಗಳೊಂದಿಗೆ ಕೈಜೋಡಿಸಿದ್ದಾರೆಯೇ ಎಂಬ ನೇರ ಪ್ರಶ್ನೆಗೆ, "ಅವರು ಪೂರ್ಣ ಪ್ರಮಾಣದಲ್ಲಿ ರಾಜಿ (Fully Compromised) ಮಾಡಿಕೊಂಡಿದ್ದಾರೆ" ಎಂದು ಭಗವಂತ್ ಮಾನ್ ಉತ್ತರಿಸಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
PublicNext
03/04/2026 06:58 pm
LOADING...