ಚೆನ್ನೈ: ರಾಜಕೀಯದಲ್ಲಿ ಅಧಿಕಾರಕ್ಕಾಗಿ ನಾಯಕರನ್ನು ಓಲೈಸುವ ಬಗ್ಗೆ ಕಿಡಿಕಾರಿದ ತಮಿಳುನಾಡು ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ "ನಾನು ಇಲ್ಲಿಗೆ ಬಂದಿರುವುದು ಎಂಎಲ್‌ಎ ಅಥವಾ ಎಂಪಿ ಎಂಬ ಹಣೆಪಟ್ಟಿ ಹಚ್ಚಿಕೊಳ್ಳುವುದಕ್ಕಲ್ಲ. ನನ್ನ ಹೆಸರಿನ ಜೊತೆಗಿದ್ದ 'ಐಪಿಎಸ್' ಎಂಬ ಪ್ರತಿಷ್ಠಿತ ಗೌರವವನ್ನೇ ತ್ಯಜಿಸಿ ಬಂದವನು ನಾನು. ಹಾಗಾಗಿ, ಹೆಸರಿನ ಮುಂದೆ ಮತ್ತೊಂದು ಬಿರುದು ಸೇರಿಸಿಕೊಳ್ಳುವ ಆಸೆ ನನಗಿಲ್ಲ" ಅಬ್ಬರಿಸಿದ್ದಾರೆ.
"ಯಾವುದೇ ನಾಯಕನಿಗೆ ಬೆಣ್ಣೆ ಹಚ್ಚಲು, ಶಾಲು ಹೊದಿಸಿ ಪಾಂಪರ್ (Pamper) ಮಾಡಲು ನಾನು ರಾಜಕೀಯಕ್ಕೆ ಬಂದಿಲ್ಲ. ನನ್ನ ಹೆಸರನ್ನು ಸುಂದರಗೊಳಿಸಿಕೊಳ್ಳಲು ಇಂತಹ ಹಣೆಪಟ್ಟಿಗಳ ಅಗತ್ಯ ನನಗಿಲ್ಲ" ಎಂದು ನೇರವಾಗಿಯೇ ನುಡಿದಿದ್ದಾರೆ.
ತಮ್ಮ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸಿದ ಅಣ್ಣಾಮಲೈ, "ನಾನು ಇಲ್ಲಿರುವುದು ತಮಿಳುನಾಡಿನ ಯುವಜನತೆಗಾಗಿ. ಅವರ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರ ಬದುಕು ಬದಲಾಗಲಿ ಎಂಬ ಏಕೈಕ ಆಶಯದೊಂದಿಗೆ ನಾನು ಕೆಲಸ ಮಾಡುತ್ತಿದ್ದೇನೆ. ಇದಕ್ಕಾಗಿ ನಾನು ಎಂದಿಗೂ ಬದಲಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
PublicNext
03/04/2026 08:45 pm
LOADING...