ಬಾಗಲಕೋಟೆ: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇಂಧನ ಬೆಲೆ ಏರಿಕೆಯಾಗುತ್ತಿದ್ದು, ಇದನ್ನು ವಿರೋಧಿಸಿ ಆಟೋ ಚಾಲಕರು ಇಂಧನ ಸಚಿವ ಕೆ. ಹೆಚ್. ಮುನಿಯಪ್ಪ ಅವರ ಮನೆಗೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
ಬಾಗಲಕೋಟೆ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಇಂಧನ ಬೆಲೆ ನಿಗದಿಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ಬೆಲೆ ಏರಿಸುವ ಅಧಿಕಾರ ಕೇಂದ್ರಕ್ಕಿದ್ದು, ನಿಮ್ಮ ಆಕ್ರೋಶ ದಿಲ್ಲಿಯತ್ತ ಇರಲಿ ಎಂದು ಚಾಲಕರಿಗೆ ಕಿವಿಮಾತು ಹೇಳಿದ್ದಾರೆ.
"ಕೇಂದ್ರ ಸರ್ಕಾರ ಪೂರೈಸುವ ಇಂಧನವನ್ನು ನಾವು ಕೇವಲ ವಿತರಕರು (Distributors) ಅಷ್ಟೇ. ಇಂಧನ ಬೆಲೆ ಏರಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಹಾಗಾಗಿ, ಆಟೋ ಚಾಲಕರು ತಮ್ಮ ಆಕ್ರೋಶವನ್ನು ಕೇಂದ್ರ ಸರ್ಕಾರದತ್ತ ವ್ಯಕ್ತಪಡಿಸಬೇಕು" ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಇನ್ನು ಎರಡು ಉಪಚುನಾವಣೆಗಳ ಫಲಿತಾಂಶ ರಾಜಕಾರಣದಲ್ಲಿ ಪರಿಣಾಮ ಬೀರುತ್ತೆ ಎಂದು ವಿಜಯೇಂದ್ರ ಹೇಳುತ್ತಾರೆ ಎಂಬ ಪ್ರಶ್ನೆಗೆ ಗರಂ ಆದ ಸಿಎಂ ಸಿದ್ದರಾಮಯ್ಯ ಶೇ ೪೦ ರಷ್ಟು ಅಲ್ಪಸಂಖ್ಯಾತರಿದ್ದಾರೆ ಬಜೆಟ್‌ನಲ್ಲಿ ಎಲ್ಲರಿಗೂ ಕೊಟ್ಟಿದ್ದೇವೆ ಅವರಿಗೂ ಕೊಟ್ಟಿದ್ದೇವೆ ಎಂದರು .
PublicNext
03/04/2026 08:44 pm
LOADING...