ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೈಲ ಬೆಲೆ ಏರಿಕೆ ಬಿಸಿ ; ಸಾವಿರಾರು ಪಾಕಿಸ್ತಾನೀಯರಿಂದ ಕತ್ತೆ ಏರಿ ಸವಾರಿ

ಹೈದರಾಬಾದ್ (ಪಾಕಿಸ್ತಾನ): ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿರುವುದನ್ನು ಖಂಡಿಸಿ ಹೈದರಾಬಾದ್‌ನ ಸಾರ್ವಜನಿಕರು ವಿನೂತನ ಹಾಗೂ ವ್ಯಂಗ್ಯಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ವಾಹನಗಳಿಗೆ ಇಂಧನ ತುಂಬಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ರಸ್ತೆಗಳಲ್ಲಿ ಕತ್ತೆಗಳನ್ನೇರಿ ಸವಾರಿ ಮಾಡುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.

​ದೇಶದಲ್ಲಿ ಹಣದುಬ್ಬರ ಮತ್ತು ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದ್ದು, ಸಾಮಾನ್ಯ ಜನರಿಗೆ ಪೆಟ್ರೋಲ್ ಕೊಳ್ಳುವುದು ದುಸ್ತರವಾಗಿದೆ. ಇಂಧನ ಬೆಲೆ ಏರಿಕೆಯಿಂದಾಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ ಎಂದು ದೂರಿದ ಸ್ಥಳೀಯರು, ಬೈಕ್ ಮತ್ತು ಕಾರುಗಳ ಬದಲು ಇನ್ನು ಮುಂದೆ ಕತ್ತೆಗಳನ್ನೇ ಅವಲಂಬಿಸಬೇಕಾದ ದಿನಗಳು ಬಂದಿವೆ ಎಂದು ಅಣಕಿಸಿದರು.

ಪ್ರತಿಭಟನೆಯ ಉದ್ದಕ್ಕೂ ಘೋಷಣೆಗಳನ್ನು ಕೂಗಿದ ಅವರು, ಕೂಡಲೇ ತೈಲ ಬೆಲೆ ಇಳಿಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರತಿಭಟನೆಯ ದೃಶ್ಯಗಳು ವೈರಲ್ ಆಗಿದ್ದು, ಪಾಕಿಸ್ತಾನದ ಆರ್ಥಿಕ ದುಸ್ಥಿತಿಗೆ ಹಿಡಿದ ಕನ್ನಡಿಯಂತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Edited By :
PublicNext

PublicNext

04/04/2026 04:12 pm

Cinque Terre

10.37 K

Cinque Terre

0

ಸಂಬಂಧಿತ ಸುದ್ದಿ