ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾವಿನ ಸುಳಿಯಿಂದ ಮಕ್ಕಳನ್ನ ಪಾರು ಮಾಡಿ ಕೊನೆಯುಸಿರೆಳೆದ ತಂದೆ..!

ತಂದೆಯ ಪ್ರೀತಿ ಎಂಥದ್ದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಕಣ್ಣೆದುರೇ ಸಾವಿನ ಅಲೆಗಳ ಮಧ್ಯೆ ಸಿಲುಕಿದ್ದ ಮೂವರು ಹೆಣ್ಣುಮಕ್ಕಳನ್ನು ಕಾಪಾಡಲು 53 ವರ್ಷದ ವ್ಯಕ್ತಿಯೊಬ್ಬರು ಸಮುದ್ರಕ್ಕೆ ಜಿಗಿದಿದ್ದಾರೆ. ಮಕ್ಕಳನ್ನು ಒಬ್ಬೊಬ್ಬರಾಗಿ ದಡಕ್ಕೆ ತಂದು ನಿಲ್ಲಿಸಿದ ಆ ತಂದೆ, ಕೊನೆಗೆ ಸುಸ್ತಾಗಿ ಮಕ್ಕಳ ಮಡಿಲಲ್ಲೇ ಕೊನೆಯುಸಿರೆಳೆದಿದ್ದಾರೆ. ಏನಿದು ಘಟನೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್."

ಹೌದು ಫ್ಲೋರಿಡಾ ಕಡಲತೀರದಲ್ಲಿ ಮಂದಹಾಸ ಬೀರುತ್ತಿದ್ದ ಆ ಸಂಜೆ, ಕ್ಷಣಾರ್ಧದಲ್ಲಿ ದುರಂತವಾಗಿ ಬದಲಾಯಿತು. 53 ವರ್ಷದ ಫ್ರೆಡ್ ಪೆಪ್ಪರ್‌ಮನ್ ತಮ್ಮ ಮೂವರು ಪುತ್ರಿಯರಾದ ಗ್ರೇಸ್, ಒಲಿವಿಯಾ ಮತ್ತು ಕ್ಯಾಥರಿನ್ ಜೊತೆ ಕಾಲ ಕಳೆಯುತ್ತಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ನೋಡನೋಡುತ್ತಿದ್ದಂತೆಯೇ ಸಮುದ್ರದಲ್ಲಿ ಭೀಕರ ಸುಳಿ ಕಾಣಿಸಿಕೊಂಡಿತು. ಆಟವಾಡುತ್ತಿದ್ದ ಮೂವರು ಹೆಣ್ಣುಮಕ್ಕಳು ಅಲೆಗಳ ಅಬ್ಬರಕ್ಕೆ ಸಿಲುಕಿ ದಡದಿಂದ ದೂರಕ್ಕೆ ಎಳೆಯಲ್ಪಟ್ಟರು. 'ಅಪ್ಪಾ... ಪ್ಲೀಸ್ ಹೆಲ್ಪ್ ಅಸ್' ಎಂದು ಮಕ್ಕಳು ಕಿರುಚೋಕೆ ಶುರು ಮಾಡಿದ್ರು..

ಮಕ್ಕಳ ಕೂಗು ಕೇಳಿದ ಫ್ರೆಡ್, ಒಂದು ಕ್ಷಣವೂ ತಡಮಾಡಲಿಲ್ಲ. ಆ ರಕ್ಕಸ ಅಲೆಗಳ ವಿರುದ್ಧ ಸೆಣಸಾಡಲು ಸಮುದ್ರಕ್ಕೆ ಜಿಗಿದರು. ಪ್ರಾಣದ ಹಂಗು ತೊರೆದು ಮೊದಲು ಒಬ್ಬ ಮಗಳನ್ನು, ನಂತರ ಎರಡನೇ ಮಗಳನ್ನು ದಡಕ್ಕೆ ಎಳೆದು ತಂದರು. ದೇಹ ದಣಿದಿದ್ದರೂ, ಮೂರನೇ ಮಗಳನ್ನು ಅಲೆಗಳ ಹಿಡಿತದಿಂದ ಬಿಡಿಸಿ ಸುರಕ್ಷಿತವಾಗಿ ದಡಕ್ಕೆ ತಂದು ನಿಲ್ಲಿಸಿದರು. ಮೂವರು ಮಕ್ಕಳನ್ನು ಸಾವಿನ ದವಡೆಯಿಂದ ಪಾರು ಮಾಡಿ ಕರೆ ತಂದ ಫ್ರೆಡ್, ದಡಕ್ಕೆ ಬಂದ ಕ್ಷಣದಲ್ಲೇ ಕುಸಿದು ಬಿದ್ದರು. ಅತಿಯಾದ ಸುಸ್ತು ಮತ್ತು ಉಸಿರಾಟದ ತೊಂದರೆಯಿಂದ ಅವರು ಸಾವನ್ನಪ್ಪಿದರು.

ಅವರು ಕಣ್ಣು ಮುಚ್ಚುವ ಮುನ್ನ ಅಳುತ್ತಿದ್ದ ಪುತ್ರಿಯರಿಗೆ ಹೇಳಿದ ಕೊನೆಯ ಮಾತು 'ಐ ಗಾಟ್ ಯು'. ಅಂದರೆ, 'ಮಗಳೇ ನಾನು ನಿಮ್ಮನ್ನು ಉಳಿಸಿದೆ, ಹೆದರಬೇಡಿ' ಎಂದು. ತನ್ನ ಉಸಿರನ್ನೇ ಕೊಟ್ಟು ಮಕ್ಕಳನ್ನು ಉಳಿಸಿದ ಈ ತಂದೆಯ ಸಾಹಸಕ್ಕೆ ಇಂದು ಇಡೀ ಜಗತ್ತೇ ಸಲಾಂ ಎನ್ನುತ್ತಿದೆ.

Edited By : Abhishek Kamoji
PublicNext

PublicNext

04/04/2026 01:22 pm

Cinque Terre

21.68 K

Cinque Terre

1

ಸಂಬಂಧಿತ ಸುದ್ದಿ