ಬ್ರಹ್ಮಾವರ: ಉಡುಪಿಗೆ ಸಮಾನವಾಗಿ ವೇಗವಾಗಿ ಬೆಳೆಯುತ್ತಿರುವ ತಾಲೂಕು ಕೇಂದ್ರ ಬ್ರಹ್ಮಾವರದಲ್ಲಿ ಹಿಂದೂ ರುದ್ರಭೂಮಿಗೆ ಎಂದು ಮೀಸಲಿರಿಸಿದ ವಾರಂಬಳ್ಳಿ ಗ್ರಾಮದ ಸರ್ವೆ ನಂಬರ್ 103/2 ರಲ್ಲಿ 3ಎಕರೆ 20 ಸೆಂಟ್ಸ್ ಜಾಗದಲ್ಲಿ ಬೇಳೂರು ಜೆಡ್ಡು ಬಳಿ ಇರುವ ಮುಕ್ತಿಧಾಮಕ್ಕೆ ಕಾಯಕಲ್ಪ ನೀಡಬೇಕಾಗಿದೆ.
ರುದ್ರ ಭೂಮಿಗೆ ಸುತ್ತ ಕಂಪೌಂಡ್, ತೆರೆದ ಬಾವಿ, ಶವ ದಹನ ಮಾಡುವ ಜಾಗದಲ್ಲಿ ತಗಡಿನ ಚಪ್ಪರ ಇದೆ. ಆದರೆ ಸುತ್ತಲೂ ಬೆಳೆದ ಕುರುಚಲು ಗಿಡಗಂಟಿಗಳು ತುಕ್ಕು ಹಿಡಿದ ಗೇಟ್ ಶವ ದಹನ ಮಾಡಲು ಬೇಕಾದ ಸಲಕರಣೆಗಳು ಇಲ್ಲದೆ ಯಾವುದೇ ಮೇಲ್ವಿಚಾರಕರು ಇಲ್ಲದೆ ಹಿಂದೂ ರುದ್ರಭೂಮಿ ಭಯ ನೀಡುವ ಭೂಮಿಯಂತಾಗಿದೆ.
ಗ್ರಾಮೀಣ ಭಾಗದಲ್ಲಿ ಕೆಲವು ಗ್ರಾಮ ಪಂಚಾಯಿತಿ ಇತ್ತೀಚಿನ ವರ್ಷದಲ್ಲಿ ರುದ್ರಭೂಮಿಗಳಿಗೆ ಕಾಯಕಲ್ಪ ನೀಡಿ ಶಿವನ ವಿಗ್ರಹ ಸರೋವರ, ಹೂವಿನ ಗಿಡಗಳನ್ನು ಬೆಳೆಸಿ ಸ್ಮಶಾನ ಅಂದರೆ ಭಯ ಮುಕ್ತವಾಗುವ ರೀತಿಯಲ್ಲಿ ಮಾಡಿ ಗಮನಸೆಳೆಯುತ್ತಿದೆ.
ಕ್ರೈಸ್ತ ಮುಸ್ಲಿಂರ ಚರ್ಚ್ ಮಸೀದಿ ಬಳಿಯಲ್ಲಿರುವ ವ್ಯವಸ್ಥಿತ ಮೋಕ್ಷ ಸ್ಥಳದಂತೆ ಬ್ರಹ್ಮಾವರದಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಅಗತ್ಯ ಇರುವ ಹಾಳು ಬಿದ್ದ ಈ ರುದ್ರ ಭೂಮಿಗೆ ಸಂಘ ಸಂಸ್ಥೆ ಅಥವಾ ಸರ್ಕಾರ ಸೂಕ್ತ ಕಾಯಕಲ್ಪ ಮಾಡಬೇಕಾಗಿದೆ.
ಶಿವರಾಮ ಆಚಾರ್ಯ ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ
PublicNext
02/04/2026 09:32 pm
LOADING...