ಕುಂದಾಪುರ: ಪುರಸಭೆ ವ್ಯಾಪ್ತಿಯ ಪೇಟೆ ವೆಂಕಟರಮಣ ದೇವಸ್ಥಾನದ ಬಳಿ ಮುಖ್ಯ ರಸ್ತೆಯಲ್ಲಿರುವ ಮಧು ಗ್ಯಾಸ್ ಏಜೆನ್ಸಿ ಎದುರುಗಡೆ ಗುರುವಾರ ಬೆಳಿಗ್ಗೆಯಿಂದ ಸಂಜೆಯ ತನಕ ಮನೆಯ ಅಡುಗೆ ಅನಿಲ ಸಿಲಿಂಡರಿಗಾಗಿ 30- 40 ಕಿಲೋ ಮೀಟರ್ ದೂರದಿಂದ ಬಂದು ಸರತಿ ಸಾಲಿನಲ್ಲಿ ನಿಂತು ಸುಸ್ತಾದ ಗ್ರಾಹಕರು ಕುಂದಾಪುರದ ಮಧು ಗ್ಯಾಸ್ ಏಜೆನ್ಸಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ
ಕಳೆದ ಹಲವು ದಿನಗಳಿಂದ ಮಧು ಗ್ಯಾಸ್ ಏಜೆನ್ಸಿಯವರು ಗ್ರಾಹಕರಿಗೆ ಸರಿಯಾಗಿ ಸಿಲಿಂಡರ್ ನೀಡದೆ ವಂಚಿಸುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ .
ಸಿಲಿಂಡರ್ ಗ್ಯಾಸ್ ಬುಕ್ ಹೆಚ್ಚಿನ ಗ್ರಾಹಕರ ಮನೆಯವರು ಮನೆಯ ಹಿರಿಯರ ಹೆಸರಿನಲ್ಲಿದ್ದು ಗ್ರಾಹಕರು ಸಿಲಿಂಡರ್ ಬುಕ್ ಮಾಡಲು ಮಧು ಗ್ಯಾಸ್ ಏಜೆನ್ಸಿಗೆ ಕರೆ ಮಾಡಿದರೆ ಕರೆ ಸ್ವೀಕರಿಸದೆ ಗ್ರಾಹಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಹಾಗಾಗಿ ಮನೆಯ ಹಿರಿಯ ವಯಸ್ಸಿನವರು ಕುಂದಾಪುರದ ಮಧು ಗ್ಯಾಸ್ ಏಜೆನ್ಸಿ ಎದುರುಗಡೆ ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತು ಸುಸ್ತಾಗಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು
ಹೌದು ಗ್ರಾಹಕರು ಗ್ಯಾಸ್ ಸಿಲಿಂಡರ್ ಬುಕ್ಕಿಂಗಾಗಿ 20 ದಿನ ಕಳೆದರೂ ಮಧು ಗ್ಯಾಸ್ ಏಜೆನ್ಸಿ ಯವರು ಮನೆಯವರಿಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ನೀಡದೆ ವಂಚಿಸುತ್ತಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಇತ್ತೀಚಿಗೆ ದಿನಗಳಲ್ಲಿ ಮಧು ಗ್ಯಾಸ್ ಏಜೆನ್ಸಿ ಯವರ ವಿರುದ್ಧ ಮಾಧ್ಯಮದಲ್ಲಿ ವರದಿ ಬಿತ್ತರಿಸಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿಯವರು ಎಲ್ಲಾ ಗ್ಯಾಸ್ ಏಜೆನ್ಸಿ ಯವರಿಗೆ ಗ್ರಾಹಕರಿಗೆ ಯಾವುದೇ ರೀತಿ ತೊಂದರೆ ಆಗದ ರೀತಿಯಲ್ಲಿ ನಡೆದುಕೊಳ್ಳುವಂತೆ ಆದೇಶ ಮಾಡಿದರು ಕೂಡ ಜಿಲ್ಲಾಧಿಕಾರಿಗಳ ಆದೇಶಕ್ಕೆ ಡೋಂಟ್ ಕೇರ್ ಹಾಗೂ ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಸೂಚನೆ ನೀಡಿದರು ಕೂಡ ಗ್ಯಾಸ್ ಏಜೆನ್ಸಿ ಯವರು ಮಾತ್ರ ಕಿವಿಗೆ ಕೇಳುತ್ತಿಲ್ಲ ಎಂಬ ನಾಟಕ ಮುಂದುವರೆದಿದೆ.
ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳು ತಕ್ಷಣ ಇಂತಹ ಗ್ಯಾಸ್ ಏಜೆನ್ಸಿ ವಿರೋಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ವರದಿ: ದಾಮೋದರ ಮೊಗವೀರ ನಾಯಕವಾಡಿ ಪಬ್ಲಿಕ್ ನೆಕ್ಸ್ಟ್ ಬೈಂದೂರು
PublicNext
02/04/2026 05:47 pm