ಶಿರಹಟ್ಟಿ: ಪ್ರಸ್ತುತ ಯುದ್ದಗಳ ಸಂದರ್ಭದಲ್ಲೂ ಭಾರತ ದೇಶದ ಜನತೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದೆ ಎಂದರೆ ಅದಕ್ಕೆ ಶ್ರೀ ಭಗವಾನ ಮಹಾವೀರ ಸ್ವಾಮಿಯ ಅಹಿಂಸಾ ತತ್ವ, ಬುದ್ಧ ಬಸವಾದಿಗಳ ಉಪದೇಶಗಳೇ ಕಾರಣ, ನಾವು ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳಬೇಕು ಎಂದು ತಹಶೀಲ್ದಾರ್ ರಾಘವೇಂದ್ರ ರಾವ್ ಅವರು ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಇಂದು ಶ್ರೀ ಭಗವಾನ ಮಹಾವೀರ ಜಯಂತಿಯಅಂಗವಾಗಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ತಹಶೀಲ್ದಾರ್ ರವರು ಮಾತನಾಡಿದರು. ಜೈನ ಧರ್ಮ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ. ಧರ್ಮದ ಆಚಾರ ವಿಚಾರಗಳು ನಿರ್ದಿಷ್ಟವಾದ ಜಾತಿ ಮತಕ್ಕೆ ಸೀಮಿತವಾಗಿರದೇ ಮಾನವಕುಲದ ಒಳಿತಿಗೆ ಮಾರ್ಗದಶಕವಾಗಿವೆ. ಕೋಪಕ್ಕಿಂತ ಕ್ಷಮೆ, ದ್ವೇಷಕ್ಕಿಂತ ಪ್ರೀತಿ, ಹಿಂಸೆಗೆ ಬದಲು ದಯೆ ತೋರುವುದು, ಅಸೂಯೆನ್ನು ಬಿಡುವುದು ಶಾಂತಿಯುತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಮುಖಂಡರು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಕಚೇರಿ ಸಿಬ್ಬಂದಿಗಳು ಇದ್ದರು.
Kshetra Samachara
30/03/2026 03:35 pm
LOADING...