ಮುಲ್ಕಿ: ಪಡುಪಣಂಬೂರು ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನದಲ್ಲಿ ನೇಮೋತ್ಸವವು ಆನೆಗುಂದಿ ಮಹಾಸಂಸ್ಥಾನ ಮಠದ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಹಾಗೂ ಸೀಮೆಯ ಒಂಬತ್ತು ಮಾಗಣೆಯ ಅರಸರಾದ ದುಗ್ಗಣ್ಣ ಸಾವಂತರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಬುಧವಾರ ಪ್ರಾತಕಾಲ ಕ್ಷೇತ್ರದ ನಾಗ ಸಾನಿಧ್ಯದಲ್ಲಿ ಪಂಚಾಮೃತ ಅಭಿಷೇಕ, ಅಶ್ವತ್ಥ ಪೂಜೆ, ದೈವಗಳ ಸಾನಿಧ್ಯ ವೃದ್ಧಿಗೆ ನವಕ ಕಲಶ ಪ್ರಧಾನ, ಕಲಶಾಭಿಷೇಕ, ದೈವಗಳಿಗೆ ಪರ್ವ, ಮಹಾ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ನಾಲ್ಕೂರು ಪಂಜುರ್ಲಿ ಮತ್ತು ಪರಿವಾರ ದೈವಗಳ ಚಪ್ಪರ ಏರಿ ಭಂಡಾರ ಕೋಡಿಯಡಿಗೆ ಬರುವುದು, ಪಂಜುರ್ಲಿ ದೈವದ ನೇಮೋತ್ಸವ, ಕಲ್ಕುಡ ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನಡೆಯಿತು.
ಈ ಸಂದರ್ಭ ದೈವಸ್ಥಾನದ ಕೂಡುವಳಿಕೆ ಮೊಕ್ತೇಸರ ಎಚ್ ಭುಜಂಗ ಆಚಾರ್ಯ, 2ನೇ ಮೊಕ್ತೇಸರ ವೈ ಅನಂತಯ್ಯ ಆಚಾರ್ಯ,ಗೌರವಾಧ್ಯಕ್ಷ ಸೂರ್ಯ ಕುಮಾರ್, ಅಧ್ಯಕ್ಷ ಪಿ ಜಗದೀಶ ಆಚಾರ್ಯ, ಕೋಶಾಧಿಕಾರಿ ಕೆ ಚಂದ್ರಶೇಖರ ಆಚಾರ್ಯ, ಕಾರ್ಯದರ್ಶಿ ನಾಗೇಶ್ ಟಿ ಜಿ ಹಾಗೂ ಅರ್ಚಕ ವೃಂದ ಆಡಳಿತ ಮಂಡಳಿಯ ಸದಸ್ಯರು, ವಿಶ್ವಕರ್ಮ ಸಮಾಜ ಸೇವಾ ಸಂಘ, ಗಾಯತ್ರಿ ಮಹಿಳಾ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.
PublicNext
02/04/2026 10:55 am