ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾರಕೂರಿನಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ನಾಲ್ಕು ಮಂದಿಗೆ ಸನ್ಮಾನ

ಬ್ರಹ್ಮಾವರ: ಕಳೆದ ಕೆಲವು ವರ್ಷದಿಂದ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಅನೇಕ ಭಾಗದಲ್ಲಿ ನಡೆದ ಹಲವಾರು ಮನೆಗೆ ನುಗ್ಗಿ ಕಳ್ಳತನ ಮಾಡಿದ ಅನೇಕ ಘಟನೆಗೆಯಾವೂದೆ ಸುಳಿವು ನೀಡದಂತೆ ಕಳ್ಳತನ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬ ಬಾರಕೂರಿನಲ್ಲೆ ವಾಸ ಮಾಡಿಕೊಂಡಿದ್ದ ಪ್ರವೀಣ್ ಎನ್ನುವ ವ್ಯಕ್ತಿಯನ್ನು ಬಂಧಿಸಿ ಹಲವಾರು ಕಳ್ಳತನಕ್ಕೆ ಅಂತಿಮ ಹಾಡಿದ್ದಾರೆ.

ಯುವತಿ ಯೋರ್ವಳನ್ನು ವಿವಾಹಿತನಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆ ಸೇರಿದಂತೆ ಅನೇಕ ಕಡೆಯಲ್ಲಿ ಕೂಲಿ ಕೆಲಸವನ್ನು ಕೂಡಾ ಮಾಡಿಕೊಂಡಿದ್ದ ವ್ಯಕ್ತಿ ಇತ್ತೀಚೆಗೆ ಬಾರಕೂರಿನಲ್ಲಿ ನಡೆದ ನಾಗಮಂಡಲದಂದು ಬಾರಕೂರು ಹೇರಾಡಿಯ ನಿವೃತ್ತ ಶಿಕ್ಷಕ ನಾಗಬನ ಅರ್ಚಕ ಮಂಜುನಾಥ್ ರಾವ್ ಅವರ ಮನೆಯಿಂದ ಚಿನ್ನಾಭರಣ ಮತ್ತು ಹಣದೊಂದಿಗೆ ಕಳ್ಳತನ ಮಾಡಿದ ಬಾರೀ ಪೊಲೀಸರೀಗೆ ಸವಾಲಾಗುವಂತೆ ಮಾಡಿದ ಚಾಲಾಕಿ ಕಳ್ಳನನ್ನು ಬಂಧಿಸಿದ್ದರು.

ವೃತ್ತ ನೀರೀಕ್ಷಕಗೋಪಿ ಕೃಷ್ಣ ಮತ್ತು ಠಾಣಾಧಿಕಾರಿ ಅಶೋಕ ಮಾಳಬಾಗಿ ಯವರ ಮಾರ್ಗದರ್ಶನಲ್ಲಿ ಕ್ರೈಂ ವಿಭಾಗದ ಬ್ರಹ್ಮಾವರ ಪೊಲೀಸರು ಪತ್ತೆ ಹಚ್ಚಿ ಕಳ್ಳನನ್ನು ಹಿಡಿದಕಾರಣ ಬಾರಕೂರು ಹೇರಾಡಿಯ ಆಧಿಶೇಷ ಸನ್ನೀಧಿಯ ವಾರ್ಷಿಕ ಕಾರ್ಯಕ್ರಮದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿರುವ ನಿವೃತ್ತ ಸೇನಾನಿ ಬಾರಕೂರಿನ ಸುರೇಶ್‌ಬಾಬು, ಮತ್ತು ಅಶೋಕ್, ವಿಶ್ವನಾಥ್ ಶೆಟ್ಟಿ, ಕಿರಣ್ ಇವರನ್ನು ಸನ್ಮಾನಿಸಲಾಯಿತು.ಹೇರಾಡಿಯಸನ್ನೀಧಿಯ ರತ್ನಾಕರ ಶೆಟ್ಟಿ, ರಾಜೇಂದ್ರ, ಶ್ರೀಧರ, ಸುರೇಶ್ ಪೂಜಾರಿ, ಉದಯ ಕುಮಾರ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/04/2026 07:06 pm

Cinque Terre

386

Cinque Terre

0

ಸಂಬಂಧಿತ ಸುದ್ದಿ