ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಸುಮಾರು 5 ಶತಮಾನಗಳ ಇತಿಹಾಸವಿರುವ ಎಣ್ಣೂರು ನಾಗಬ್ರಹ್ಮ ಆದಿ ಬೈದ್ಯರುಗಳ ಗರಡಿಯ ನೇಮೋತ್ಸವವು ಪ್ರತಿ ವರ್ಷದಂತೆ ಈ ಬಾರಿ ಎಪ್ರಿಲ್ 1 ರಂದು ವಿಜೃಂಭಣೆಯಿಂದ ನಡೆಯಿತು.
ಕೋಟಿ, ಚೆನ್ನಯರ ನೇಮೋತ್ಸವ ಭಕ್ತಿಪೂರ್ವಕವಾಗಿ ನಡೆದಿದ್ದು ಸಾವಿರಾರು ಭಕ್ತರು ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿದ್ರು.ಅಜಿಪತ್ತಾಜಿ ಗರಡಿ ಮೂವತ್ತಮೂರು ತಾವು ಮೇಲಾಯಿ ಗರಡಿ ಎಣ್ಣೂರು ಗರಡಿ (ಆರುವತ್ತಾರು ಗರಡಿ ಮೂವತ್ತ ಮೂರು ಕಡೆ ನೆಲೆ ಊರಿದ ) ಎಂಬ ನುಡಿಗಟ್ಟಿನಂತೆ ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ನೆಲೆಯೂರಿದ ಆದಿ ಸ್ಥಳ - ಆದಿ ಗರಡಿ ಎಣ್ಣೂರು ಇತಿಹಾಸ ಪ್ರಸಿದ್ಧವಾಗಿದೆ.
PublicNext
02/04/2026 05:34 pm
LOADING...