ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ: ಬಿಲ್ ಪಾಸ್‌ಗೆ ₹35,000 ಲಂಚ - ಕೃಷ್ಣಾ ಭಾಗ್ಯದ ಜಲ ನಿಗಮ ಇಂಜಿನಿಯರ್‌ಗಳಿಗೆ ಲೋಕಾಯಕ್ತ ಬಿಸಿ

ಯಾದಗಿರಿ: ಮುಗಿದ ಕಾಮಗಾರಿಯ ಬಿಲ್ ಪಾಸ್ ಮಾಡಲು ಫೋನ್‌ಪೇ ಮೂಲಕ ₹35,000 ಲಂಚ ಸ್ವೀಕರಿಸಿದ ಆರೋಪದ ಮೇಲೆ ಕೆಬಿಜೆಎನ್‌ಎಲ್‌ನ ಇಬ್ಬರು ಇಂಜಿನಿಯರ್‌ಗಳನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಶಹಾಪುರ ತಾಲೂಕಿನ ಭೀಗುಡಿಯಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೆಬಿಜೆಎನ್‌ಎಲ್)ದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇಇ) ಮಧುಸೂದನ ಹಾಗೂ ಕಿರಿಯ ಇಂಜಿನಿಯರ್ (ಜೆಇ) ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದವರು. ಕಾಮಗಾರಿಯ ಬಿಲ್ ಪಾಸ್ ಮಾಡಲು ₹35,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇವರು, ಫೋನ್‌ಪೇ ಮೂಲಕ ಹಣವನ್ನು ಸ್ವೀಕರಿಸಿದ್ದರು. ಈ ಲಂಚದ ಹಣವನ್ನು ಎಇಇ ಮಧುಸೂದನ ಅವರೇ ತಮ್ಮ ಫೋನ್‌ಪೇ ಖಾತೆಗೆ ಪಡೆದಿದ್ದರು ಎಂದು ತಿಳಿದುಬಂದಿದೆ.

ವಡಗೇರಾ ತಾಲೂಕಿನ ಗಡ್ಡೆಸೂಗುರಿನ ಖಾಸಿಂಸಾಬ್ ಜಲಾಲ್ ಸಾಬ್ ಎಂಬುವವರು ನೀಡಿದ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಲೋಕಾಯುಕ್ತ ಎಸ್‌ಪಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಜೆ.ಎಚ್. ಇನಾಂದಾರ್ ಹಾಗೂ ಸಿಬ್ಬಂದಿ ನಿಖರ ಕಾರ್ಯಾಚರಣೆ ನಡೆಸಿ ಇಬ್ಬರು ಇಂಜಿನಿಯರ್‌ಗಳನ್ನು ರೆಡ್‌ಹ್ಯಾಂಡಾಗಿ ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

02/04/2026 08:07 pm

Cinque Terre

2.92 K

Cinque Terre

0

ಸಂಬಂಧಿತ ಸುದ್ದಿ