ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರದ ಶ್ರೀ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಮಾರ್ಗದರ್ಶನದಲ್ಲಿ19 ಅಡಿ ಎತ್ತರದ ಶ್ರೀ ಮುಖ್ಯಪ್ರಾಣನ ಏಕಶಿಲಾಮೂರ್ತಿ ಪ್ರತಿಷ್ಠೆ ಸಂಪನ್ನಗೊಂಡಿತು. ಜೊತೆಗೆ ನಿತ್ಯಾನಂದ ಸ್ವಾಮಿಯ ಮೂರ್ತಿ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇಂದು ಜರಗಿತು.
ಆ ಪ್ರಯುಕ್ತ ಕ್ಷೇತ್ರದ ತಂತ್ರಿಗಳಾದ ಶ್ರೀ ದೇವದಾಸ್ ತಂತ್ರಿ ಮುಂಬಯಿ ನೇತೃತ್ವದಲ್ಲಿ ಶ್ರೀ ಮುಖ್ಯಪ್ರಾಣ ಶಿಲಾಮೂರ್ತಿ, ನಿತ್ಯಾನಂದ ಸ್ವಾಮಿಯ ಮೂರ್ತಿಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ ಮತ್ತು ಪಲ್ಲಪೂಜೆ ಜರುಗಿತು.ಬಳಿಕ
ಸಾಧುಗಳ ಭಾಗವಹಿಸುವಿಕೆಯಲ್ಲಿ ಹಿಂದೂ ಧರ್ಮ ಸಭೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಡಿ ಪಿ.ಕೆ. ಗಣೇಶ್ ಅವರಿಂದ ಸ್ಯಾಕ್ಸೋಫೋನ್ ವಾದನ, ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಗಾನ ಸಂಭ್ರಮ ನಡೆಯಿತು.
ಈ ಸಂದರ್ಭ ಬೆಂಗಳೂರು ಸಿದ್ಧಿವಿನಾಯಕ ಶರಭೇಶ್ವರ ಪೀಠದ ಡಾ|ಮಹರ್ಷಿ ಜಯ ಶ್ರೀನಿವಾಸನ್ ಗುರೂಜಿ, ಶ್ರೀಕ್ಷೇತ್ರ ಮಾಣಿಲದ ಶ್ರೀಮೋಹನದಾಸ್ ಸ್ವಾಮೀಜಿ, ಮಂಗಳೂರು ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ದಿಪೀಠದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ ಬಾಬಾ, ಮುಖ್ಯಪ್ರಾಣ ಶಿಲಾ ಮೂರ್ತಿ ಪ್ರತಿಷ್ಠಾಪನಾ ಸಮಿತಿ, ಶ್ರೀ ಸನಾತನ ಸೇವಾದಳ, ಆಡಳಿತ ಮಂಡಳಿ ಇತರರು ಉಪಸ್ಥಿತರಿದ್ದರು.
Kshetra Samachara
02/04/2026 08:55 pm
LOADING...