ಉಡುಪಿ : ಬಿಹಾರದಲ್ಲಿ ಜನಿಸಿದ ಮಹಾವೀರ. 24 ನೇ ತೀರ್ಥಂಕರರಾಗಿ ಲೋಕ ಕಲ್ಯಾಣಕ್ಕೆ ಮುಂದಾದರು. ಪಂಚ ತತ್ವದ ಅಡಿಯಲ್ಲಿ ಸಮಾಜವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ ಮಹಾವೀರರು ಸಂದೇಶದಂತೆ ಸತ್ಯ ಮತ್ತು ಅಹಿಂಸೆಯ ಪಾಲನೆಯ ಮೂಲಕ ಸಾಮರಸ್ಯದ ಸಮಾಜವನ್ನು ಕಟ್ಟುವಂತಾಗಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ ಎ ಗಫೂರ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲಾಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ್ ಮಿಲನ್ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಇಂದಿನ ದಿನಗಳ ಅನೇಕ ಸಮಸ್ಯೆಗಳ ನಿವಾರಣೆಗಾಗಿ ದಾರ್ಶನಿಕರ ಚಿಂತನೆಗಳು ದಾರಿ ದೀಪ. ಪ್ರತಿಯೊಬ್ಬರು ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದರು.
ಜಗತ್ತಿಗೆ ಅಹಿಂಸೆ ಮತ್ತು ಶಾಂತಿ ಪರಮೋಚ್ಚ ಸಂದೇಶವನ್ನು ನೀಡಿದ ಭಗವಾನ್ ಮಹಾವೀರರ ತತ್ವಗಳು ಇಂದಿನ ಸಂಘರ್ಷಮಯ ಕಾಲಘಟ್ಟದಲ್ಲಿ ವಿಶ್ವಕ್ಕೆ ಮಾದರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಶ್ವೇತಾ ಜೈನ್ ಭಗವಾನ್ ಮಹಾವೀರರ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಶ್ಮಿ ಸಾಗರ್ ಜಿನಾ ಸ್ಮೃತಿಯನ್ನು ಪ್ರಸ್ತುತ ಪಡಿಸಿದರು .
ಈ ಸಂದರ್ಭದಲ್ಲಿ ಯೋಗರಾಜ್ ಶಾಸ್ತ್ರೀ ಇವರನ್ನು ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಜೈನ್ ಮಿಲನ್ ಅಧ್ಯಕ್ಷ ಡಾ. ನಿತಿನ್ ಪಾಟೀಲ್, ಭಾರತೀಯ ಜೈನ್ ಮಿಲನ್ ನ ಕಾರ್ಯದರ್ಶಿ ಪ್ರಸನ್ನ, ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
30/03/2026 10:23 pm
LOADING...