ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಾಧಿ ಒಡೆಯುವ ಮುಸ್ಲಿಂ ಸಮಾಜದ ಕೆಲವರ ಮಾನಸಿಕತೆಯನ್ನು ನಾವು ಸಹಿಸುವುದಿಲ್ಲ - ಚನ್ನಬಸಪ್ಪ

ಶಿವಮೊಗ್ಗ : ಸಮಾಧಿ ಒಡೆಯುವ ಮುಸ್ಲಿಂ ಸಮಾಜದ ಕೆಲವರ ಮಾನಸಿಕತೆಯನ್ನು ನಾವು ಸಹಿಸುವುದಿಲ್ಲ, ಕೊಲೆ ಮಾಡಿದಾಯ್ತು, ಈಗ ಸಮಾಧಿ ಒಡೆಯುವ ಕೃತ್ಯವನ್ನು ಹೇಗೆ ಸಹಿಸಲು ಸಾಧ್ಯ, ಇದಕ್ಕೆ ಮುಸ್ಲಿಂ ಸಮಾಜ ಉತ್ತರ ನೀಡಬೇಕು ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.

ಸ್ನೇಹಿತರ ನಡುವಿನ ಜಗಳ ಬಿಡಿಸಲು ಹೋಗಿ ಕೊಲೆಯಾದ ಊರಗಡೂರು ಬಾಲಕ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಘಟನೆ ಹಿನ್ನೆಲೆಯಲ್ಲಿ ಗುರುವಾರ ಸಂಕೇತ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅವರು, ಮಾತನಾಡಿದರು.ಫೆ. 23 ನೇ ತಾರೀಖು ಒಂದು ಘಟನೆ ನಡೀತು. 7 ಜನ ಅಪ್ರಾಪ್ತರು ಬಾಲಕ ಸಂಕೇತ್ ನನ್ನು ಕೊಲೆಮಾಡಿದರು.

ಅವರೆಲ್ಲರೂ ಅಪ್ರಾಪ್ತರು, ನಶೆಯಲ್ಲಿದ್ದರು ಅಂತೆಲ್ಲ ಪ್ರಕರಣಕ್ಕೆ ಇನ್ನೇನೋ ಹೇಳಿ ಹಿಂದೂ ಸಮಾಜವನ್ನು ಸಮಾಧಾನ ಮಾಡಲಾಯಿತು. ಈಗ ನೋಡಿದರೆ ಸಂಕೇತ್ ಸಮಾಧಿಯನ್ನು ಒಡೆದು ಹಾಕಲಾಗಿದೆ. ಮುಸ್ಲಿಂ ಸಮಾಜದ ಕೆಲವರ ಮಾನಸಿಕತೆ ಭಯಾನಕವಾಗಿದೆ ಎಂದರು.

Edited By : Vinayak Patil
Kshetra Samachara

Kshetra Samachara

02/04/2026 09:06 pm

Cinque Terre

2.8 K

Cinque Terre

0

ಸಂಬಂಧಿತ ಸುದ್ದಿ