ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ರೀಲ್ಸ್ ಕ್ರೇಜ್ ಜೀವಕ್ಕೆ ಕುತ್ತು - ಅಪಾಯಕಾರಿ ವ್ಹೀಲಿಂಗ್ ವಿಡಿಯೋ ಹಾಕಿ ಪೊಲೀಸರ ಅತಿಥಿಯಾದ ಯುವಕರು

ಶಿವಮೊಗ್ಗ: ನಗರದ ರಸ್ತೆಗಳಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ನಡೆಸಿ, ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಇಬ್ಬರು ಯುವಕರ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಶಿವಮೊಗ್ಗದ ವಿಮಾನ ನಿಲ್ದಾಣ ರಸ್ತೆಯ ಪುಟ್ಟಪ್ಪ ಕ್ಯಾಂಪ್ ಬಳಿ ಮೊಪೆಡ್ ವಾಹನದಲ್ಲಿ ನಡೆದಿತ್ತು.

ಪೊಲೀಸರ ಗಮನಕ್ಕೆ ಬಂದಿದ್ದು ಹೇಗೆ?

ಯುವಕರು ತಮ್ಮ ಸಾಹಸ ಪ್ರದರ್ಶನದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸಂಚಾರಿ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆಯೇ, ಬೈಕ್‌ನ ನಂಬರ್ ಪ್ಲೇಟ್ ಆಧಾರದ ಮೇಲೆ ಯುವಕರನ್ನು ಪತ್ತೆ ಹಚ್ಚಿ ಎಫ್‌ಐಆರ್ ದಾಖಲಿಸಲಾಗಿದೆ.

Edited By : Somashekar
PublicNext

PublicNext

03/04/2026 05:03 pm

Cinque Terre

8.26 K

Cinque Terre

0