ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಕೃತಿಗನುಗುಣವಾಗಿ ಬದುಕಿದರೆ ಉತ್ತಮ ಜೀವನ ನಡೆಸಲು ಸಾಧ್ಯ - ನ್ಯಾ. ಮಂಜುನಾಥ ಜಿ. ಎ

ಶಿವಮೊಗ್ಗ : ಪ್ರಕೃತಿಯನ್ನು ಅನುಸರಿಸಿ ಬದುಕಿದಲ್ಲಿ ಉತ್ತಮ ಆರೋಗ್ಯ, ಜೀವನ‌ ಹಾಗೂ ಸಮತೋಲನ ಸಾಧ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ಜಿ ಎ ತಿಳಿಸಿದರು.

ಗುರುವಾರ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 'ವಿಶ್ವ ಜಲ ದಿನ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿಯಲ್ಲಿ ಎಲ್ಲವೂ ಮಿಳಿತವಾಗಿದೆ. ಅದನ್ನರಿತು ನಾವು ಬದುಕಬೇಕು.‌ ಪ್ರಕೃತಿಯಲ್ಲಿ ಅನೇಕ ಚಮತ್ಕಾರಗಳಿವೆ. ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲ ರೀತಿಯ ಜೀವ ಸಂಕುಲ ನಮ್ಮ ಜೀವನದ ಮುಖ್ಯ ಭಾಗವಾಗಿದ್ದು, ಇದನ್ನು‌ ಸಮತೋಲನವಾಗಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದ ಅವರು ಕುಟುಂಬವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಕೂಡ ಪ್ರಕೃತಿ ಎಂದರು.

ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ್ನು ಸಮರ್ಪಕವಾಗಿ ಒದಗಿಸಬೇಕು. ಪ್ರಾಣಿ, ಪಕ್ಷಿಗಳಿಗೆ ನೀರಿನ ಸೌಲಭ್ಯ ಒದಗಿಸುವುದು ಪುಣ್ಯದ ಕೆಲಸ‌ ಎಂದು ತಿಳಿಸಿದರು.

Edited By : PublicNext Desk
Kshetra Samachara

Kshetra Samachara

02/04/2026 06:14 pm

Cinque Terre

1.42 K

Cinque Terre

0