ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸನಗರದಲ್ಲಿ ಹನುಮ ಜಯಂತಿ ಸಂಭ್ರಮ

ಶಿವಮೊಗ್ಗ : ಹೊಸನಗರ ಪಟ್ಟಣದ ನಗರ ರಸ್ತೆಯಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ 18ನೇ ವರ್ಷದ ಹನುಮ ಜಯಂತಿ ಹಾಗೂ ಶ್ರೀ ದೇವರ ರಥೋತ್ಸವ ಸಡಗರ ಸಂಭ್ರಮದಿಂದ ವರ್ಣರಂಜಿತವಾಗಿ ನೆರವೇರಿತು.

ಸಂಜೆ ಭಜನೆ ಕುಣಿತ ಮಂಗಳವಾದ್ಯದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಿತು.

ಗುರುವಾರ ಬೆಳಿಗ್ಗೆ ಗೋಪೂಜೆ, ಗಣಪತಿ ಹೋಮ, ರಾಮ ತಾರಕ ಹೋಮ, ಶ್ರೀದೇವರ ತೊಟ್ಟಿಲು ಸೇವೆ, ಸಾಮೂಹಿಕ ರುದ್ರಾಭಿಷೇಕ, ಪವಮಾನ ಅಭಿಷೇಕ, ಶ್ರೀ ನಾಗದೇವರ ಸನ್ನಿಧಿಯಲ್ಲಿ ತತ್ವದಿವಾಸ ಹೋಮ ನಂತರ ಕಳಷಾಭಿಷೇಕ ಮಹಾಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ನಂತರ ನೆರೆದಿದ್ದ ನೂರಾರು ಭಕ್ತವೃಂದಕ್ಕೆ ಮಹಾ ಅನ್ನಸಂತರ್ಪಣೆ ನೆರವೇರಿತು.

Edited By : PublicNext Desk
Kshetra Samachara

Kshetra Samachara

02/04/2026 07:32 pm

Cinque Terre

800

Cinque Terre

0