ನೆಲಮಂಗಲ: ನೆಲಮಂಗಲದಲ್ಲಿ ಆಟೋ LPG ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದ ಸೂಪರ್ ಗ್ಯಾಸ್ ಬಂಕ್ ಬಳಿ ನೂರಾರು ಆಟೋಗಳು ಸಾಲಾಗಿ ನಿಂತು ಗ್ಯಾಸ್ ಪಡೆಯಲು ಕಾಯುತ್ತಿರುವ ದೃಶ್ಯ ಕಂಡುಬಂದಿದೆ.
ಮಧ್ಯಾಹ್ನದಿಂದಲೇ ಕ್ಯೂನಲ್ಲಿ ನಿಂತಿದ್ದರೂ ಅನೇಕ ಚಾಲಕರಿಗೆ ಗ್ಯಾಸ್ ಸಿಗದೇ ಆತಂಕ ಹೆಚ್ಚಾಗಿದೆ. ಯಶವಂತಪುರ, ಮಾಗಡಿ ರಸ್ತೆ, ದಾಸರಹಳ್ಳಿ ಹಾಗೂ 8 ಮೈಲಿ ಪ್ರದೇಶಗಳಲ್ಲಿಯೂ ಗ್ಯಾಸ್ ಅಭಾವ ತೀವ್ರವಾಗಿದೆ. ಬೆಂಗ್ಳೂರಿನಲ್ಲಿ ಹಲವಾರು ಗ್ಯಾಸ್ ಬಂಕ್‌ಗಳು ಸ್ಟಾಕ್ ಇಲ್ಲದೆ ಬಂದ್ ಆಗಿದ್ದು, “No Stock” ಫಲಕಗಳನ್ನು ಹಾಕಲಾಗಿದೆ.
ಗ್ಯಾಸ್ ಪಡೆಯಲು ವಾಹನಗಳು ಕಿಲೋಮೀಟರ್‌ಗಳಷ್ಟು ಉದ್ದದ ಸಾಲಿನಲ್ಲಿ ನಿಂತಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಚಾಲಕರ ನಡುವೆ ವಾಗ್ವಾದಗಳೂ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಸ್ಥಳಕ್ಕೆ ಆಗಮಿಸಿ ಚಾಲಕರನ್ನು ಸಮಾಧಾನಪಡಿಸಲು ಕ್ರಮ ಕೈಗೊಂಡಿದ್ದಾರೆ.
PublicNext
02/04/2026 10:41 pm
LOADING...