ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇವಾಗ ಅಧಿಕಾರಿಗಳು ಎಲ್ಲಾ ಸತ್ತು ಹೋದ್ರಾ ? ಸರ್ಕಾರಕ್ಕೆ ಹಿಗ್ಗಾ ಮುಗ್ಗಾ ಬೈದ ಆಟೋ ಚಾಲಕರು..!

ಬೆಂಗಳೂರು : ಬೆಂಗಳೂರಿನ ರಸ್ತೆಗಳಲ್ಲಿ ಸದಾ ಹಸಿರು-ಹಳದಿ ಬಣ್ಣದ ಆಟೋಗಳದ್ದೇ ಅಬ್ಬರ. ಆದರೆ ಕಳೆದ ಕೆಲವು ದಿನಗಳಿಂದ ಈ ಅಬ್ಬರ ಗ್ಯಾಸ್ ಬಂಕ್‌ಗಳ ಮುಂದೆ ಸದ್ದಿಲ್ಲದೆ ಸಾಲುಗಟ್ಟಿ ನಿಂತಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವೋ ಏನೋ, ಇಲ್ಲಿನ ಆಟೋ ಚಾಲಕರ ಬದುಕು ಮಾತ್ರ ಬೀದಿಗೆ ಬಂದಿದೆ. ಯಶವಂತಪುರದಿಂದ ಹಿಡಿದು ಮೈಸೂರು ರಸ್ತೆಯವರೆಗೆ ಎಲ್ಲಿ ನೋಡಿದರೂ ಎರಡು ಕಿಲೋಮೀಟರ್‌ವರೆಗಿನ ಉದ್ದನೆಯ ಕ್ಯೂಗಳು! ಬೆಳ್ಳಂಬೆಳಗ್ಗೆ ಬಂದು ಸಾಲಿನಲ್ಲಿ ನಿಂತರೂ ಕೇವಲ 400 ರೂಪಾಯಿಯ ಗ್ಯಾಸ್ ಮಾತ್ರ ಸಿಗುತ್ತಿದೆ. "ಗ್ಯಾಸ್ ಹುಡುಕುತ್ತಲೇ ಇರುವ ಅಲ್ಪಸ್ವಲ್ಪ ಇಂಧನವೂ ಖಾಲಿಯಾಗುತ್ತಿದೆ" ಎನ್ನುವ ಚಾಲಕರ ಅಳಲು ಕೇಳುವವರಿಲ್ಲದಂತಾಗಿದೆ.

ಸರ್ಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಗ್ಯಾಸ್ ಪೂರೈಕೆ ಸ್ವಲ್ಪ ಮಟ್ಟಿಗೆ ಸುಧಾರಿಸಿದ್ದರೂ, ಖಾಸಗಿ ಬಂಕ್‌ಗಳು ಮಾತ್ರ ಬಾಗಿಲು ಹಾಕುತ್ತಿವೆ ಅಥವಾ ಲೀಟರ್‌ಗೆ 10 ರೂಪಾಯಿವರೆಗೆ ಬೆಲೆ ಏರಿಸಿ ಚಾಲಕರ ಹೊಟ್ಟೆಯ ಮೇಲೆ ಹೊಡೆಯುತ್ತಿವೆ. ಮನೆ ಬಾಡಿಗೆ, ಮಕ್ಕಳ ಓದು, ಆಟೋ ಇಎಂಐ ಹೀಗೆ ಸಾಲು ಸಾಲು ಜವಾಬ್ದಾರಿಗಳ ನಡುವೆ ಸಿಲುಕಿರುವ ಚಾಲಕರಿಗೆ ಈ ಗ್ಯಾಸ್ ಕೊರತೆ ಗಾಯದ ಮೇಲೆ ಬರೆ ಎಳೆದಂತಿದೆ. ಸಿಎನ್‌ಜಿ (CNG) ಆಟೋಗಳು ನಿರಾಳವಾಗಿದ್ದರೂ, ಎಲ್‌ಪಿಜಿ ನಂಬಿಕೊಂಡಿರುವ ಲಕ್ಷಾಂತರ ಚಾಲಕರು ಮಾತ್ರ ಇಂದು ಹೆಗಲ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಬೆಂಗಳೂರಿನ ಲೈಫ್‌ಲೈನ್ ಎನಿಸಿಕೊಂಡಿರುವ ಆಟೋ ಸಂಚಾರ ಹೀಗೆಯೇ ಕುಂಠಿತವಾದರೆ ಸಾಮಾನ್ಯ ಜನರಿಗೂ ಸಂಕಷ್ಟ ತಪ್ಪಿದ್ದಲ್ಲ.

Edited By :
PublicNext

PublicNext

03/04/2026 08:21 pm

Cinque Terre

6.06 K

Cinque Terre

1