ಬೆಂಗಳೂರು: ಬೆಂಗಳೂರಿನ ಅತ್ಯಂತ ಕ್ಲಾಸ್ ಮತ್ತು ಪ್ರತಿಷ್ಠಿತ ಪ್ರದೇಶ ಎಂದರೆ ಮೊದಲಿಗೆ ನೆನಪಿಗೆ ಬರುವ ಹೆಸರು—ಸದಾಶಿವನಗರ.ಇಲ್ಲಿನ ವಿಶಾಲವಾದ ರಸ್ತೆಗಳು, ಸಾಲು ಸಾಲು ಹಸಿರು ಮರಗಳು ಮತ್ತು ಶಿಸ್ತುಬದ್ಧ ವಾತಾವರಣ ನೋಡಿದ್ರೆ, ಇದು ಕೇವಲ ಒಂದು ಬಡಾವಣೆ ಅಲ್ಲ—ಹಳೆಯ ಬೆಂಗಳೂರಿನ ಒಂಬತ್ತು ನೆನಪಿನಂತೆ ಕಾಣಿಸುತ್ತದೆ.
ಸದಾಶಿವನಗರ ಅಂದ್ರೆ ಕೇವಲ ಶ್ರೀಮಂತರ ಪ್ರದೇಶ ಮಾತ್ರವಲ್ಲ, ಇದು ಬೆಂಗಳೂರಿನ ಹೆಮ್ಮೆ ಕೂಡ. ಇಲ್ಲಿ ಕಾಣಿಸಿಕೊಳ್ಳುವ ಸ್ವಚ್ಛತೆ, ಶಾಂತಿ ಮತ್ತು ಸುವ್ಯವಸ್ಥೆ ನಗರದಲ್ಲಿನ ಬೇರೆ ಪ್ರದೇಶಗಳಿಗೆ ಮಾದರಿಯಂತಿವೆ.
ಇಲ್ಲಿನ ಉದ್ಯಾನವನಗಳು ಅತಿ ಸುಂದರವಾಗಿದ್ದು, ವಾಕಿಂಗ್ ಪ್ರಿಯರಿಗೆ ಇದು ನಿಜಕ್ಕೂ ಸ್ವರ್ಗವೇ ಸರಿ. ಪ್ರತಿಯೊಂದು ಮನೆಯ ಮುಂದೆ ಕಾಣುವ ಗಿಡ-ಮರಗಳು ಈ ವಾರ್ಡ್‌ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.ಒಟ್ಟಿನಲ್ಲಿ, ಸದಾಶಿವನಗರ ಅಂದ್ರೆ ಹಸಿರು, ಶಿಸ್ತು ಮತ್ತು ಪ್ರತಿಷ್ಠೆಯ ಪ್ರತೀಕ.ಬನ್ನಿ, ಈ ವಾರ್ಡ್‌ನ ವಿಶೇಷತೆಗಳು ಮತ್ತು ಇಲ್ಲಿನ ಜನರ ಅಭಿಪ್ರಾಯ ಏನು ಅಂತ ತಿಳಿದುಕೊಳ್ಳೋಣ
PublicNext
03/04/2026 06:56 pm
LOADING...