ಬೆಂಗಳೂರು: ಜೀವನ್ ಭೀಮಾನಗರದ ಬಸ್ ನಿಲ್ದಾಣದ ಸಮೀಪದಲ್ಲಿರುವ ಸ್ವಾಗತ ಎಂಬ ಹೆಸರಿನ ಬಾರ್ ಬಗ್ಗೆ ಇಲ್ಲಿನ ನಿವಾಸಿಗಳು ತಕರಾರು ಎತ್ತಿದ್ದಾರೆ. ಬಾರ್ ನ ಪಕ್ಕದಲ್ಲೇ ಆದಿ ಪರಾಶಕ್ತಿ ಅಮ್ಮನವರ ದೇವಸ್ಥಾನವಿದ್ದರೆ, ನೂರು ಮೀಟರ್ ಅಂತರದಲ್ಲೇ ಸ್ಕೂಲ್ ಇದೆ. ಈ ಬಾರ್ ನಿಂದಾಗಿ ಕುಡುಕರ ಸಂಖ್ಯೆ ಹೆಚ್ಚಾಗಿರೋದರ ಪರಿಣಾಮ ಇಲ್ಲಿ ಹೆಣ್ಣು ಮಕ್ಕಳು ಓಡಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಬಾರ್ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು "ಪಬ್ಲಿಕ್ ನೆಕ್ಸ್ಟ್" ಮುಂದೆ ಇಲ್ಲಿನ ಮಹಿಳೆಯರು ಕಣ್ಣೀರು ಹಾಕಿದ್ರು.
ಬಾರ್ ನಿಂದಾಗಿ ನನ್ನ ಗಂಡನನ್ನು ಕಳೆದುಕೊಂಡೆ ಎಂದು ಓರ್ವ ಮಹಿಳೆ ತನ್ನ ದು:ಖವನ್ನು ತೋಡಿಕೊಂಡರೆ, ಮತ್ತೋರ್ವಳು ಈ ಬಾರ್ ನಿಂದಾಗಿ ನನ್ನ ಅಪ್ಪನನ್ನೇ ಕಳೆದುಕೊಳ್ಳುವಂತಾಯಿತು ಅಂತಾ ನೋವಿನಿಂದ ಹೇಳುತ್ತಾರೆ.
ಒಟ್ಟಿನಲ್ಲಿ ಪ್ರಪಂಚದಲ್ಲಿ ಬಾರ್ ಗಳೇ ಇರಬಾರದು ಅನ್ನುತ್ತಾರೆ ಇವರು!
PublicNext
03/04/2026 04:25 pm
LOADING...