ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಭವನ ನಿರ್ಮಾಣಕ್ಕೆ ಶಾಸಕ ಸಿ.ಪಿ. ಯೋಗೇಶ್ವರ್ ಗುದ್ದಲಿಪೂಜೆ ನೆರವೇರಿಸಿದರು. ನಗರದ ಶಿವಾನಂದ ಚಿತ್ರಮಂದಿರದ ಎದುರು ಸಂಘಕ್ಕೆ ನಿವೇಶನ ಮಂಜೂರಾಗಿದ್ದು, ಮೂರು ದಶಕಗಳ ಕಾಲ ನಡೆದ ಹೋರಾಟಕ್ಕೆ ಇಂದು ಜಯಸಿಕ್ಕಂತಾಗಿದೆ.
ಹಿರಿಯ ಪತ್ರಕರ್ತರಿಗೆ ಸನ್ಮಾನ
1990ರ ದಶಕದಲ್ಲಿ ನಿವೇಶನಕ್ಕಾಗಿ ಶ್ರಮಿಸಿದ್ದ ಹಿರಿಯ ಪತ್ರಕರ್ತರಾದ ತಿಮ್ಮೇಶ್ ಪ್ರಭು ಮತ್ತು ನಾಗವಾರ ಶಿವರಾಮೇಗೌಡ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಚನ್ನಪಟ್ಟಣ ತಾಲೂಕು ಅಧ್ಯಕ್ಷ ಡಿ.ಎಂ. ಮಂಜುನಾಥ್ ಹಾಗೂ ತಾಲೂಕು-ಜಿಲ್ಲಾ ಪದಾಧಿಕಾರಿಗಳು ಸನ್ಮಾನ ಕಾರ್ಯ ನೆರವೇರಿಸಿದರು.
ಶಾಸಕರ ಭರವಸೆ ಮತ್ತು ಗಣ್ಯರ ಉಪಸ್ಥಿತಿ
ಪತ್ರಕರ್ತರ ಭವನದ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ನನ್ನದು, ಯಾರು ಸಹ ಚಿಂತಿಸಬೇಡಿ ಎಂದು ಶಾಸಕ ಯೋಗೇಶ್ವರ್ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ, ಕಿರಿಯ ಪತ್ರಕರ್ತರು ಹಾಗೂ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.
PublicNext
20/04/2026 10:48 pm
LOADING...