ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ: ಅಲಿಕಲ್ಲು ಸಹಿತ ಭಾರೀ ಮ ಳೆ: ಜನಜೀವನ ಅಸ್ತವ್ಯಸ್ತ, ರಸ್ತೆಗಳು ಜಲಾವೃತ!

ಬಳ್ಳಾರಿ: ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಗೆ ಕೊನೆಗೂ ಮಳೆರಾಯ ತಂಪೆರದಿದ್ದಾನೆ. ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನಿಂದ ಬಳಲುತ್ತಿದ್ದ ಜಿಲ್ಲೆಯ ಜನರಿಗೆ ಈ ಮಳೆಯು ಸ್ವಲ್ಪಮಟ್ಟಿಗೆ ನಿರಾಳತೆ ತಂದಿದೆ.

ವಿವಿಧ ತಾಲೂಕುಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ಸಂಡೂರಿನಲ್ಲಿ ನಿನ್ನೆ ಪ್ರಾರಂಭವಾದ ಮಳೆಯು ನಂತರ ಕುರುಗೋಡು, ಸಿರುಗುಪ್ಪ ಮತ್ತು ಕಂಪ್ಲಿಯ ಕೆಲವು ಭಾಗಗಳಿಗೂ ವ್ಯಾಪಿಸಿ ಉತ್ತಮವಾಗಿ ಸುರಿದಿದೆ.

ಅಲಿಕಲ್ಲು ಸಹಿತ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಕೆಲಕಾಲ ಅಸ್ತವ್ಯಸ್ತಗೊಂಡಿತು. ಮೋಡ ಕವಿದ ವಾತಾವರಣ ಸೃಷ್ಟಿಯಾಗಿ, ಗಾಳಿ ಸಹಿತ ಮಳೆಯ ಆರ್ಭಟ ಹೆಚ್ಚಾಯಿತು. ರಸ್ತೆಗಳಲ್ಲೂ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದಲ್ಲದೆ, ಅಲಿಕಲ್ಲು ಸಹಿತ ಮಳೆಯು ಜನರನ್ನು ಮನೆಗಳಲ್ಲೇ ಇರುವಂತೆ ಮಾಡಿತ್ತು.

ವರದಿ : ಹೊನ್ನುರಸ್ವಾಮಿ ಕೆ. ಟಿ. ಎಲ್, ಬಳ್ಳಾರಿ.

Edited By :
PublicNext

PublicNext

22/04/2026 05:45 pm

Cinque Terre

11.83 K

Cinque Terre

0