ಧಾರವಾಡ: ಓದಲು ಧಾರವಾಡಕ್ಕೆ ಬರುವವರಿಗೆ ಓದುವ ಕಲೆಯನ್ನು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಶಿಲ್ಪವನ್ನಾಗಿ ಮಾಡಿದ ಶಿಲ್ಪಿ ಅಂದರೇ ಅದು ಬಸವರಾಜ ಕೌಲಗಿ. ಎಕ್ಸಲಂಟ್ ಕೋಚಿಂಗ್ ಸೆಂಟರ್ ಮೂಲಕ ತರಬೇತಿ ಕೇಂದ್ರ ಆರಂಭಿಸಿ ಸುಧೀರ್ಘ 27 ವರ್ಷಗಳ ಸೇವೆಯನ್ನು ಮಾಡುತ್ತಿರುವ ಸಂಸ್ಥೆಯ ಕಾರ್ಯ ಜನಮೆಚ್ಚುಗೆಯ ವೇದಿಕೆಯಾಗಿದೆ.
ಎಕ್ಸಲಂಟ್ ನೀಟ್ ಅಕಾಡೆಮಿಯು ಸಾವಿರಾರು ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆಯಲು ದಾರಿದೀಪವಾದ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಇಂತಹದೊಂದು ಸಂಸ್ಥೆ ನಡೆದು ಬಂದಿರುವುದೇ ರೋಚಕ ಸಂಗತಿ. ಹೌದು.. ಸುಮಾರು 27 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದೆ. 2015ರಲ್ಲಿ ಕೋಚಿಂಗ್ ಸೆಂಟರ್ ಆರಂಭಿಸುವ ಮೂಲಕ ಛೇರ್ಮನ್ ಬಸವರಾಜ ಕೌಲಗಿಯವರು ಯುವ ಸಮುದಾಯಕ್ಕೆ ದಾರಿದೀಪ ಆಗಿದ್ದಾರೆ. ಅಲ್ಲದೇ ನಿರಂತರ ಪರಿಶ್ರಮ, ಶಿಸ್ತು ಬದ್ಧ ಕಲಿಕೆಯನ್ನು ತನ್ನ ಒಡಲಾಳದ ಮಗವನ್ನಾಗಿಸಿಕೊಂಡ ಸಂಸ್ಥೆಯು ಸಾಕಷ್ಟು ಸಾಧನೆಯ ಹಾದಿಯನ್ನು ಕ್ರಮಿಸಿದೆ. 2015ರಲ್ಲಿಯೇ ಮೊಟ್ಟ ಮೊದಲ ಕೋಚಿಂಗ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನೂ ಸಾಕಷ್ಟು ಕೋಚಿಂಗ್ ಸೆಂಟರ್‌ಗಳು ಧಾರವಾಡದಲ್ಲಿ ತಲೆಯೆತ್ತಿರುವಾಗಲೇ ಏನಾದರೂ, ಹೊಸತನ ಸೃಷ್ಟಿಸಬೇಕು. ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಬೇಕು ಎಂಬುವಂತ ಮಹದಾಸೆಯೊಂದಿಗೆ 2020ರಲ್ಲಿ ಕೋವಿಡ್ ಸಮಯದಲ್ಲಿ ಎಕ್ಸಲಂಟ್ ನೀಟ್ ಅಕಾಡೆಮಿ ಆರಂಭ ಮಾಡಲಾಯಿತು. ಆರಂಭದಲ್ಲಿ ಸಾಕಷ್ಟು ಸಂಕಷ್ಟ ಮೆಟ್ಟಿನಿಂತು, 18 ಸೀಟ್ ನಿಂದ ಆರಂಭಗೊಂಡ ಸಂಸ್ಥೆಯು ಈಗ ವರ್ಷಕ್ಕೆ ನೂರಾರು ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಸಿಗುವಂತೆ ಮಾಡುತ್ತಿರುವುದು ಸಂಸ್ಥೆಯ ಸಾಧನೆಯೇ ಸರಿ.
ಇನ್ನೂ 2 ವರ್ಷದ ಹಿಂದೇ ಪಿಯು ಕಾಲೇಜು ಆರಂಭ ಮಾಡಲಾಗಿದೆ. ಎಕ್ಸಲಂಟ್ ಕೋಚಿಂಗ್ ನಿಂದ ನೀಟ್ ಅಕಾಡೆಮಿ, ಅಕಾಡೆಮಿಯಿಂದ ಮತ್ತೇ ಕಾಲೇಜು ಆರಂಭ ಮಾಡುವ ಮೂಲಕ ಮಹತ್ವದ ಸಾಧನೆ ಮಾಡಿರುವುದು ವಿಶೇಷವಾಗಿದೆ. ಟಾಪರ್ ಗಳನ್ನು ಟಾಪರ್ ಆಗಿ ಮಾಡುವುದು ದೊಡ್ಡದಲ್ಲ. ಎಲ್ಲ ಸ್ಥರದ ವಿದ್ಯಾರ್ಥಿಗಳನ್ನು ಟಾಪರ್ ಮಾಡುವ ಕಾರ್ಯವನ್ನು ಸಂಸ್ಥೆಯು ಮಾಡುತ್ತಿದೆ. ವಿದ್ಯಾರ್ಥಿಗಳ ಹಿಂದಿನ ಮಾರ್ಕ್ಸ್ ಮೇಲೆ ಅಳೆಯದೇ, ಎಲ್ಲರಿಗೂ ಸಮಾನ ಒತ್ತನ್ನು ಕೊಟ್ಟು, ಲರ್ನಿಂಗ್ ಸ್ಪೀಡ್ ಆಧಾರದ ಮೇಲೆ ತರಬೇತಿ ನೀಡಲಾಗುತ್ತದೆ.
ಇನ್ನೂ ಹಾಸ್ಟೆಲ್, ಊಟದ ವ್ಯವಸ್ಥೆ, 15-20 ವರ್ಷದ ಅನುಭವ ಹೊಂದಿರುವ ಬೋಧಕ ಸಿಬ್ಬಂದಿ, ಒಂದೇ ಗುರಿ, ನಿಷ್ಠೆ, ಸಮಯ ಪ್ರಜ್ಞೆ, ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೂ ಅನುಕೂಲವಾಗುವ ರೀತಿಯಲ್ಲಿ ಬೋಧನೆ ಮಾಡಲಾಗುತ್ತದೆ. ಕರ್ನಾಟಕದಾದ್ಯಂತ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಸಿಗುವಂತೆ ಮಾಡುವ ಕನಸನ್ನು ಶಿಕ್ಷಣ ಸಂಸ್ಥೆ ಹೊಂದಿರುವುದು ವಿಶೇಷವಾಗಿದೆ.
ಒಟ್ಟಿನಲ್ಲಿ ಬಹಳಷ್ಟು ಸಾಧನೆಯ ಹಾದಿಯೊಂದಿಗೆ ಸಾಕಷ್ಟು ಸವಾಲು ಮೆಟ್ಟಿನಿಂತು ದಾಖಲೆ ನಿರ್ಮಾಣ ಮಾಡಿರುವ ಎಕ್ಸಲಂಟ್ ನೀಟ್ ಅಕಾಡೆಮಿ ಕಾರ್ಯಕ್ಕೆ ಎಲ್ಲೆಡೆಯೂ ಜನರ ಪ್ರಶಂಸೆ ದೊರೆತಿರುವುದು ನಿಜಕ್ಕೂ ವಿಶೇಷವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/05/2026 07:14 pm