ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೇಶವ ವಿದ್ಯಾಕೇಂದ್ರದ ಎರಡನೇ ಮಹಡಿ ಲೋಕಾರ್ಪಣೆ, ಅದ್ದೂರಿಯಾಗಿ ನಡೆದ ಸಂಭ್ರಮ..!

ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಉದ್ಯಮದ ಜೊತೆಗೆ ಶೈಕ್ಷಣಿಕ ಸೇವೆಯ ಜವಾಬ್ದಾರಿ ಹೊತ್ತಿರುವ ಶಿವಲಿಂಗಯ್ಯ ಶಿವಯೋಗಿಮಠ ಅವರು ಕೇಶವ ವಿದ್ಯಾಕೇಂದ್ರದ ಅಧ್ಯಕ್ಷರಾಗಿ ಹಲವಾರು ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದಾರೆ. ಇಂಪಲ್ಸ್ ಶಿಕ್ಷಣದ ಮೂಲಕ ಶೈಕ್ಷಣಿಕ ಸೇವೆಯನ್ನು ಆರಂಭಿಸಿ ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದೇ ಎರಡನೇ ಮಹಡಿಯ ಲೋಕಾರ್ಪಣೆ ಸಂಭ್ರಮ.

ವಾಣಿಜ್ಯನಗರಿ ಹುಬ್ಬಳ್ಳಿಯ ರೇಣುಕಾನಗರದಲ್ಲಿರುವ ಭಾರತೀಯ ಶಿಕ್ಷಣ ಪ್ರಸಾರ ಸಮಿತಿ(ರಿ)ಸಂಚಾಲಿತ ಕೇಶವ ವಿದ್ಯಾಕೇಂದ್ರದ ಎರಡನೇ ಮಹಡಿ ಲೋಕಾರ್ಪಣೆಯನ್ನು ಗದಗ ಶಿವಾನಂದ ಬ್ರಹನ್ಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ಹಾಗೂ ಆರ್.ಎಸ್.ಎಸ್ ಪ್ರಮುಖರಾದ ಮಂಗೇಶ ಭೇಂಡೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಕೇಶವ ವಿದ್ಯಾಕೇಂದ್ರದ ಎರಡನೇ ಮಹಡಿ ಲೋಕಾರ್ಪಣೆ ಹಿನ್ನೆಲೆಯಲ್ಲಿ ಹೋಮ ಹವನ ನೆರವೇರಿಸಲಾಗಿದ್ದು, ಶಿವಲಿಂಗಯ್ಯ ಶಿವಯೋಗಿಮಠ ನೇತೃತ್ವದಲ್ಲಿ ಸ್ವಾಮೀಜಿಗಳು, ವಿ.ಎಸ್.ವಿ ಪ್ರಸಾದ್ ಹಾಗೂ ಆರ್.ಎಸ್.ಎಸ್‌ ಪ್ರಮುಖರು ವೀಕ್ಷಣೆ ಮಾಡುವ ಮೂಲಕ ಕಾರ್ಯವೈಖರಿಯ ಕುರಿತು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಇನ್ನೂ ವೇದಿಕೆ ಕಾರ್ಯಕ್ರಮ ಆರಂಭದಲ್ಲಿಯೇ ಸದಾಶಿವಾನಂದ ಸ್ವಾಮೀಜಿ, ಮಂಗೇಶ್ ಭೇಂಡೆ, ಶಿವಲಿಂಗಯ್ಯ ಶಿವಯೋಗಿಮಠ ಸೇರಿದಂತೆ ಗಣ್ಯರು ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಕೊಠಡಿಗಳ ನಿರ್ಮಾಣಕ್ಕೆ ದಾನ ನೀಡಿದ ಶಾಸಕ ಮಹೇಶ್ ಟೆಂಗಿನಕಾಯಿ, ಪ್ರದೀಪ್ ಶೆಟ್ಟರ್, ಜಿತೇಂದ್ರ ಮಜೇಥಿಯಾ ಹಾಗೂ ಶ್ರೀಗಂಧ ಶೇಟ್ ಸೇರಿದಂತೆ ಇನ್ನುಳಿದ ಗಣ್ಯರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಒಟ್ಟಿನಲ್ಲಿ ಶಿವಲಿಂಗಯ್ಯ ಶಿವಯೋಗಿಮಠ ನೇತೃತ್ವದಲ್ಲಿ ಕೇಶವ ವಿದ್ಯಾಕೇಂದ್ರದ ಎರಡನೇ ಮಹಡಿ ಲೋಕಾರ್ಪಣೆ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆದಿದ್ದು, ನಿಜಕ್ಕೂ ಮಹತ್ವದ ಸಂದೇಶಕ್ಕೆ ಸಾಕ್ಷಿಯಾಗಿದೆ. ಸಂಪ್ರದಾಯದ ಪ್ರಕಾರ ಸ್ವಾಗತ, ಪೂಜೆ ಪುನಸ್ಕಾರ, ಅತಿಥಿ ಸತ್ಕಾರದ ಪರಂಪರೆಯು ಮತ್ತೊಮ್ಮೆ ಯುವ ಪೀಳಿಗೆಗೆ ಸಾಕ್ಷೀಕರಿಸುವ ರೀತಿಯಲ್ಲಿ ಅದ್ದೂರಿಯಾಗಿ ನಡೆದಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/05/2026 08:39 pm

Cinque Terre

22.68 K

Cinque Terre

0

ಸಂಬಂಧಿತ ಸುದ್ದಿ