ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಅಂಗಾರಕ ಸಂಕಷ್ಟಿ ಮಹಾಗಣಪತಿಗೆ ಭಕ್ತರು ದಂಡು! ಬೇಡಿಕೆ ಈಡೇರಿಕೆಗೆ ಪ್ರಾರ್ಥನೆ

ಹುಬ್ಬಳ್ಳಿ : ಸರ್ವ ಕಾರ್ಯಗಳ ಪ್ರಥಮ ಪೂಜಿತ ಶ್ರೀ ಮಹಾಗಣಪತಿ ಸನ್ನಿಧಾನ ಇಂದು ಭಕ್ತರ ಆಗಮನದಿಂದ ವಿಶೇಷವಾಗಿ ಕಂಗೊಳಿಸುತ್ತಿದ್ದು , ಅಂಗಾರಕ ಸಂಕಷ್ಟಿ ನಿಮಿತ್ತವಾಗಿ ಮಹಾಗಣಪತಿಗೆ ಪೂಜಾಭಿಷೇಕ ನೆರವೇರಿವೆ.

ಹೌದು ! 400 ವರ್ಷಗಳ ಹಿಂದೆ ಪೇಶ್ವೆಮಹಾರಾಜರ ಕಾಲಘಟ್ಟದಲ್ಲಿ ಹುಬ್ಬಳ್ಳಿಯ ಬಾಕಳೆ ಗಲ್ಲಿಯಲ್ಲಿ ವಿರಾಜಮಾನರಾಗಿ ಪ್ರತಿಷ್ಠಾನವಾದ ಮಹಾಗಣಪತಿಗೆ ಇಂದು ಅಂಗಾರಕ ಸಂಕಷ್ಟಿ ಚತುರ್ಥಿ ಅಂಗವಾಗಿ ಭಕ್ತರು ದಂಡು ಹೆಚ್ಚಾಗಿ ಆಗಮಿಸಿದೆ. ಅದರಂತೆ, ಅಂಗಾರಕ ಸಂಕಷ್ಟಿ ಚತುರ್ಥಿ ನಿಮಿತ್ತವಾಗಿ ವಿಶೇಷ ಪೂಜಾಭಿಷೇಕ ಮಹಾಗಣಪತಿಗೆ ನೆರವೇರಿಸಲಾಗಿದ್ದು, ಹೋಮ ಪೂಜೆ ಸಹ ಯಶಸ್ವಿಯಾಗಿವೆ. ವಿಶೇಷವಾಗಿ ಮನೆಯಲ್ಲಿ ಅಂಗಾರಕ ಸಂಕಷ್ಟಿ ಆಚರಣೆ ಮಾಡುವ ಭಕ್ತರಿಗೆ ಅರ್ಚಕ ರಮೇಶ್ ಭಟ್ ನೀಡಿದ ಮಾಹಿತಿ ಹೀಗಿದೆ.

ಮಹಾಗಣಪತಿ ದೇವಸ್ಥಾನ, ಬಾಕಳೆ ಗಲ್ಲಿ, ಹುಬ್ಬಳ್ಳಿ ವಿಶೇಷವಾಗಿ ಮಹಿಳೆಯರು, ಯುವಕರು, ವೃದ್ಧರು, ಮಕ್ಕಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಮಹಾಗಣಪತಿ ದರ್ಶನ ಪಡೆದು ತಮ್ಮ ಬೇಡಿಕೆ ಸಮರ್ಪಣೆ ಮಾಡುತ್ತಿದ್ದಾರೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/05/2026 05:16 pm

Cinque Terre

11.45 K

Cinque Terre

0

ಸಂಬಂಧಿತ ಸುದ್ದಿ