ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಅಡಿಕೆ ಮರವೊಂದು ವೆಲ್ಡಿಂಗ್ ಶಾಪ್ ಮೇಲೆ ಉರುಳಿ ಬಿದ್ದು ಹಾನಿಯಾಗಿದೆ.
ನಾಪೋಕ್ಲು-ಮಡಿಕೇರಿ ಮುಖ್ಯರಸ್ತೆಯಲ್ಲಿರುವ ಬೇತು ಗ್ರಾಮದ ನಿವಾಸಿ ಟಿ.ಎ. ಮಹಮ್ಮದ್ ಹನೀಫ್ ಅವರ ಮನೆಯ ಸಮೀಪದಲ್ಲಿದ್ದ ಅಡಿಕೆ ಮರ, ಅವರೇ ನಡೆಸುತ್ತಿದ್ದ ವೆಲ್ಡಿಂಗ್ ಮಳಿಗೆಯ ಮೇಲೆ ಬಿದ್ದಿದೆ.
ಘಟನೆಯಿಂದ ಮಳಿಗೆಗೆ ಅಳವಡಿಸಲಾಗಿದ್ದ ಕಬ್ಬಿಣದ ಪೈಪ್‌ಗಳು ಮತ್ತು ಎಂಟು ಸಿಮೆಂಟ್ ಶೀಟ್‌ಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಮರ ಬೀಳುವ ಶಬ್ದ ಕೇಳಿ ಮಳಿಗೆಯೊಳಗಿದ್ದವರು ತಕ್ಷಣ ಹೊರ ಓಡಿ ಬಂದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
PublicNext
23/04/2026 08:40 am
LOADING...