ಗೋಣಿಕೊಪ್ಪ : ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸಾವನಪ್ಪಿದ ದುರ್ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಹಾತೂರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
8ನೇ ತರಗತಿ ವಿದ್ಯಾರ್ಥಿ ಕೊಂಗೆಪಂಡ ಸಾನ್ವಿ (13) ಮೃತದುರ್ದೈವಿಯಾಗಿದ್ದಾರೆ. ಸಂಜೆ ಮನೆಯ ಹೂದೋಟದಲ್ಲಿ ಗಿಡಗಳಿಗೆ ತಾಯಿಯೊಂದಿಗೆ ನೀರು ಹಾಕುತ್ತಿದ್ದು ಕೆಲ ಕ್ಷಣದಲ್ಲಿ ಸಾನ್ವಿ ಕಾಣೆಯಾಗಿದ್ದಳು. ಮನೆಯವರು ಹುಡುಕಿದಾಗ ಮನೆಯ ಸಮೀಪದಲ್ಲಿದ್ದ ಕೆರೆಯಲ್ಲಿ ಮುಳುಗಿ ಸಾವನಪ್ಪಿರುವುದು ಕಂಡುಬಂದಿದೆ. ಸಾನ್ವಿ ಹಾತೂರು ಗ್ರಾಮದ ಕೊಂಗೆ ಪoಡ ಕುಟ್ಟಪ್ಪ , ದಿವ್ಯಾ ದಂಪತಿಯ ಪುತ್ರಿ .ಗೋಣಿಕೊಪ್ಪ ಸಂಥ ಥಾಮಸ್ ಶಾಲೆಯಲ್ಲಿ ಓದುತ್ತಿದ್ದು, 7ನೇ ತರಗತಿಯಿಂದ ಎಂಟನೇ ತರಗತಿಗೆ ಉತ್ತೀರ್ಣರಾಗಿದ್ದಳು. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
27/04/2026 10:31 am
LOADING...