ಮೊಳಕಾಲ್ಮುರು:ಪಿಎಂಶ್ರೀ ಆದರ್ಶ ವಿದ್ಯಾಲಯದ ಎಸ್.ಆರ್.ಚೈತನ್ಯ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ 619 ಅಂಕ ಪಡೆದು ತಾಲೂಕು ಟಾಪರ್ ಪಟ್ಟ ತನ್ನದಾಗಿಸಿಕೊಂಡಿದ್ದಾಳೆ.
ಈ ವಿದ್ಯಾರ್ಥಿಯು ತಾಲೂಕಿನ ಜಂಗ್ಲಿ ಸೂರಯ್ಯನಹಟ್ಟಿ ಸರಕಾರಿ ಶಾಲೆಯ ಶಿಕ್ಷಕ ಎಸ್.ಆರ್.ರಾಮಲಿಂಗಪ್ಪ, ಹಾಗೂ ಈ ಹಿಂದೆ ಮೊಳಕಾಲ್ಮುರು ಸಿಡಿಪಿಒ ಆಗಿ ಕರ್ತವ್ಯ ನಿರ್ವಹಿಸಿ ಪ್ರಸ್ತುತವಾಗಿ ಬಳ್ಳಾರಿ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಯಾಗಿರುವ ಸವಿತಾ ಅವರ ಪುತ್ರಿಯಾಗಿದ್ದಾರೆ. ಇವರು ಕೊಂಡ್ಲಹಳ್ಳಿ ಗ್ರಾಮದವರಾಗಿದ್ದಾರೆ.
ಇದೇ ಶಾಲೆಯ ಟಿ.ಜಿ ನಿತಿನ್ (614),ಬಿ.ತೇಜಶ್ರೀ (610),ಕೆ.ವಿ ಸಂಜನಾ (608),ಎಸ್. ಕವನ (604), ಶ್ರೀಶಾಂತ್(600) ಅಂಕಗಳನ್ನು ಪಡೆದು ಅತ್ಯುತ್ತಮ ಶ್ರೇಣಿ ಸ್ಥಾನಗಳನ್ನು ಪಡೆದಿದ್ದಾರೆ. ಈ ಶಾಲೆಯ 75 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 45 ಜನ ಡಿಸ್ಟಿಂಕ್ಷನ್ 30 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ತಾಲೂಕಿನಲ್ಲೇ ಅತಿ ಹೆಚ್ಚು ಅಂಕ ಪಡೆದ ಪ್ರಥಮ ಸ್ಥಾನ, ತೃತೀಯ ಸ್ಥಾನ ಹಾಗೂ ನಾಲ್ಕನೇ ಸ್ಥಾನಗಳನ್ನು ತನ್ನದಾಗಿಸಿಕೊಂಡ ಶಾಲೆ ಇದಾಗಿದೆ ಎಂದು ಶಾಲೆಯ ಉಪಪ್ರಾಚಾರ್ಯ ಎಂ.ಮಲ್ಲಿಕಾರ್ಜುನ ಮಾಹಿತಿ ನೀಡಿದರು.ತಾಲೂಕು ದ್ವಿತೀಯ ಟಾಪರ್ ಸ್ಥಾನವನ್ನು ತಾಲೂಕಿನ ಕೆರೆಕೊಂಡಾಪುರ ಆರುಣೋದಯ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂ.ಬಿ.ಮುಸ್ಕಾನ್ (618) ಪಡೆದಿದ್ದಾರೆ.ಒಟ್ಟಿನಲ್ಲಿ ಈ ವರ್ಷ ತಾಲೂಕಿಗೆ ಶೇಕಡಾ 92.71 ಪ್ರಮಾಣದ ಫಲಿತಾಂಶ ಲಭಿಸಿದೆ.
Kshetra Samachara
23/04/2026 06:26 pm
LOADING...