ಹಾಸನ:- ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆ ಉಪಟಳ ಮುಂದುವರೆದಿದ್ದು ಇಟಿಎಫ್ ಸಿಬ್ಬಂದಿ ಮೇಲೆ ಕಾಡಾನೆಯೊಂದು ಮತ್ತೆ ದಾಳಿ ಮಾಡಿದೆ. ಬೇಲೂರು-ಮೂಡಿಗೆರೆ ಅರಣ್ಯ ಗಡಿ ಹುನುಗನಹಳ್ಳಿ ಬಳಿ ಘಟನೆ ನಡೆದಿದ್ದು ಕಾಡಾನೆ ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಲು ತೆರಳಿದ್ದ ಇಟಿಎಫ್ ಸಿಬ್ಬಂದಿ ಮೇಲೆಯೆ ಕಾಡಾನೆ ಎರಗಿದೆ.
ಕಾಡಾನೆ ಓಡಾಡುತ್ತಿದ್ದುದನ್ನು ಟ್ರ್ಯಾಕ್ ಮಾಡಲು ತೆರಳಿದ್ದ ಬೇಲೂರಿನ ಮೂವರು ಇಟಿಎಫ್ ಸಿಬ್ಬಂದಿ ಕಾಡಾನೆಯನ್ನು ಕಂಡು ಓಡಲು ಪ್ರಯತ್ನಿಸಿದ್ದಾರೆ. ಮೊದಲು ರಮೇಶ್ ಎಂಬುವವರ ಮೇಲೆ ದಾಳಿ ನಡೆಸಿ ಇನ್ನುಳಿದ ಇಬ್ಬರು ಸಿಬ್ಬಂದಿಗಳನ್ನು ಅಟ್ಟಿಸಿಕೊಂಡು ಹೋಗಿದೆ. ಅದೃಷ್ಟವಶಾತ್ ರಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದು ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮೂಡಿಗೆರೆ ಆರ್‌ಎಫ್‌ಒ ಮಂಜುನಾಥ್ ಹಾಗೂ ಹಾಸನ ಎಸಿಎಫ್ ಮೋಹನ್ ಕುಮಾರ್, ಬೇಲೂರು ಆರ್‌ಎಫ್‌ಒ ಯತೀಶ್ ಆಸ್ಪತ್ರೆಗೆ ಭೇಟಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
Kshetra Samachara
24/04/2026 10:27 am
LOADING...