ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಬ್ಲಿಕ್ ನೆಕ್ಸ್ಟ್ ಫಲಶೃತಿ: ಗಂಗನಾಲ ಗ್ರಾಮಕ್ಕೆ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ - ಆಯಿಲ್ ಮಾಫಿಯಾ ಪರಿಶೀಲನೆ

ತುಮಕೂರು ತಾಲ್ಲೂಕು ಗಂಗನಾಲ ಗ್ರಾಮದಲ್ಲಿ ಕಾರ್ಖಾನೆಗಳ ಕಲುಶಿತ ಆಯಿಲ್ ಗುಂಡಿ ತೋಡಿ ಭೂಮಿಗೆ ಸುರಿಯುತ್ತಿದ್ದು ಕಾರ್ಖಾನೆ ವಿಷ ಭೂಮಿಯ ಒಡಲು ಸೇರಿ ಸುತ್ತಮುತ್ತಲ ಪರಿಸರ ಕಲುಶಿತವಾಗುತ್ತಿದ್ದು ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ನಿದ್ದೆಗೆ ಜಾರಿದೆ ಎಂಬ ವರದಿ ಪ್ರಕಟವಾದ ಕೂಡಲೇ ಎಚ್ಚೆತ್ತ ಅಧಿಕಾರಿಗಳ ತಂಡ ಶುಕ್ರವಾರ ಗಂಗನಾಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭೂ ತಾಯಿಯ ಒಡಲು ಸೇರುತ್ತಿದೆ ಕೆಮಿಕಲ್ ಆಯಿಲ್ : ನಿದ್ದೆಗೆ ಜಾರಿದೆ ಜಿಲ್ಲಾಢಳಿತ ಎಂದು ಪಬ್ಲಿಕ್ ನೆಕ್ಸ್ಟ್ ವಾಹಿನಿ ವಿಸ್ತೃತ ವರದಿ ಮಾಡಿತ್ತು,ವರದಿಗೆ ಎಚ್ಚೆತ್ತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ.

ಕೋರ ನಾಡಕಚೇರಿ ಉಪತಹಶೀಲ್ದಾರ್,ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸ್ತಳಕ್ಕೆ ಭೇಟಿ ನೀಡಿ ಗ್ರಾಮಸ್ತರಿಂದ ಸಮಸ್ಯೆ ಆಲಿಸಿದ್ದಾರೆ, ಸರ್ಕಾರದಿಂದ ಮಂಜೂರಿಯಾಗಿರುವ ಜಮೀನಿನಲ್ಲಿ ಕೆಮಿಕಲ್ ಆಯಿಲ್ ಮುಚ್ಚುತ್ತಿರುವ ವಿಚಾರ ಬಯಲಾಗಿದೆ,ಬಳಿಕ ಜಮೀನು ಸರ್ಕಾರದ ವಶಕ್ಕೆ ಪಡೆಯವಂತೆ ಗ್ರಾಮಸ್ತರಿಂದ ಸಹಿ ಪಡೆದು ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ

ಖರಾಬು ಕಡೆ ತಿರುಗಿ ನೋಡದ ಅಧಿಕಾರಿಗಳು.....

ಗಂಗನಾಲ ಗ್ರಾಮದಲ್ಲಿ ಸರ್ಕಾರಿ ಖರಾಬಿನ ಜಾಗದಲ್ಲಿಯೂ ಸಹ ಕೆಮಿಕಲ್ ಆಯಿಲ್ ಮುಚ್ಚಿರುವ ಬಗ್ಗೆ ಗ್ರಾಮಸ್ತರು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅ ಜಾಗದಲ್ಲಿ ಪರಿಶೀಲಿಸಲಿಲ್ಲ,ಸರ್ಕಾರಿ ಜಾಗವನ್ನು ಅಧಿಕಾರಿಗಳೇ ಕಾಪಾಡದಿದ್ದರೆ ಯಾರು ಕಾಪಾಡಲು ಸಾಧ್ಯ ಎಂದು ಗ್ರಾಮಸ್ತರು ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದರು.

Edited By : PublicNext Desk
Kshetra Samachara

Kshetra Samachara

24/04/2026 10:41 pm

Cinque Terre

680

Cinque Terre

0

ಸಂಬಂಧಿತ ಸುದ್ದಿ