ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಹೆಚ್ಚಾದ ಬಿಸಿಲು- ಜಿಲ್ಲಾಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ಓಪನ್

ವಿಜಯಪುರ: ಪ್ರತಿ ವರ್ಷ ಬೇಸಿಗೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಅತ್ಯಧಿಕ ಬಿಸಿಲಿನ ತಾಪಮಾನ ಇರುತ್ತೆ. ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಬಿಸಿಲಿನ ಪ್ರಖರತೆಗೆ ಮನೆಯಿಂದ ಕಾಲು ಹೊರಗಡೆ ಹೋಗದಂತಹ ಪರಿಸ್ಥಿತಿ ಇರುತ್ತೆ. ಈ ವರ್ಷವೂ ಅತ್ಯಧಿಕ ಅಂದರೆ 42 ಡಿಗ್ರಿ ಸೆಲ್ಸಿಯಸ್ ತಾಪಮಾನದತ್ತ ಬಿಸಿಲು ಏರಿಕೆ ಆಗುತ್ತಿರುವುದರಿಂದ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.

ಜೊತೆಗೆ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ಗಳುಳ್ಳ ಹವಾನಿಯಂತ್ರಿತ ಹೀಟ್ ಸ್ಟ್ರೋಕ್ ವಾರ್ಡ್ ತೆರೆಯುವ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸಜ್ಜಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ಈ ಬಿಸಿಲಿನ ತಾಪ ದಿನೇ ದಿನೆ ಏರಿಕೆಯಾಗುತ್ತಿರುವ ಪರಿಣಾಮ ಸಂಭಾವ್ಯ 'ಹೀಟ್ ವೇವ್' (ಶಾಖದ ಅಲೆ) ಎದುರಿಸಲು ವಿಜಯಪುರ ಜಿಲ್ಲಾಸ್ಪತ್ರೆ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ಹೀಟ್ ಸ್ಟ್ರೋಕ್ ವಾರ್ಡ್ ಸ್ಥಾಪನೆ ಮಾಡಲಾಗಿದ್ದು, ಈ ವಾರ್ಡ್‌ನಲ್ಲಿ ತಂಪು ವಾತಾವರಣವಿರಲು ಎಸಿ ವ್ಯವಸ್ಥೆ ಮಾಡಲಾಗಿದೆ. ಅಸ್ವಸ್ಥರಾದವರಿಗೆ ತಕ್ಷಣ ಚಿಕಿತ್ಸೆ ನೀಡಲು ಪ್ರತ್ಯೇಕ ಹತ್ತು ಹಾಸಿಗೆಗಳನ್ನು ಒಳಗೊಂಡ ವಿಶೇಷ ಕೊಠಡಿಯನ್ನು ಕಾಯ್ದಿರಿಸಲಾಗಿದೆ. ನುರಿತ ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ. ಅಗತ್ಯ ಔಷಧಿಗಳನ್ನು ಸಂಗ್ರಹಿಸಲಾಗಿದೆ. ದ್ರವ ರೂಪದ ಆಹಾರ, ತಂಪು ಪಾನೀಯ, ಸೇವಿಸಬೇಕು ಜೊತೆಗೆ ವೃದ್ಧರು, ಚಿಕ್ಕ ಮಕ್ಕಳನ್ನು ಹೊರಗಡೆ ಬಿಡಬೇಡಿ, ಅಗತ್ಯವಿದ್ದರೆ ಮಾತ್ರ ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಹೊರೆಗೆ ಬನ್ನಿ, ಇಲ್ಲವಾದರೆ ನೆರಳಿನಲ್ಲಿ ಕೆಲ್ಸ ಮಾಡಿ. ನಿರ್ಲಕ್ಷ್ಯ ವಹಿಸಿದರೆ ಹೀಟ್ ಸ್ಟ್ರೋಕ್ ಗೆ ಗೊಳಗಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

BYTE : ಶಿವಾನಂದ ಮಾಸ್ತಿಹೊಳಿ, ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕರು

ಜಿಲ್ಲಾಸ್ಪತ್ರೆಯಲ್ಲಿ ಹೀಟ್ ಸ್ಟ್ರೋಕ್ ವಾರ್ಡ್ ತೆರೆದಿರೋದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನರು ಬೇಸಿಗೆಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಪಾಲಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದು ಪಬ್ಲಿಕ್ ನೆಕ್ಸ್ಟ್ ಕಳಕಳಿ.

Edited By : Shivu K
PublicNext

PublicNext

25/04/2026 10:55 pm

Cinque Terre

19.26 K

Cinque Terre

0