ಕುಶಾಲನಗರ: ಚಲಿಸುತ್ತಿದ್ದ ಕಾರಿನ ಮೇಲೆ ಒಂಟಿ ಸಲಗ ದಾಳಿಸಿ ನಡೆಸಿದ್ದು ಕಾರು ಚಾಲಕ ಪ್ರಣಾಪಾಯದಿಂದ ಪಾರಾದ ಘಟನೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಹೊಸಕೋಟೆ ಬಳಿ ನಡೆದಿದೆ.
ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಆನೆ ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು ಕಾಡಾನೆ ದಾಳಿಗೆ ಕಾರು ಚಾಲಯ ಪ್ರಾಣಾಪಯದಿಂದ ಪಾರಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 275 ರ ಹೊಸಕೋಟೆಯ ಮೆಟ್ನಳ ಬಳಿ ಕಾರು ಹಾದು ಹೋಗುವಾಗ ಕಾಡಿನಿನಂದ ಬಂದ ಒಂಟಿ ಸಲಗ ಕಾರಿನ ಮೇಲೆ ದಾಳಿ ನಡೆಸಿದೆ. ಕಾಡಾನೆ ದಾಳಿಗೆ ಕಾರಿನ ಬಾನೆಟ್ ಹಾಗೂ ಮುಂದಿನ ಗಾಜು ಒಡೆದು ಹೋಗಿದ್ದು ಅದೃಷ್ಟವಶಾತ್ ಕಾರು ಚಾಲಕ ಪ್ರಣಾಪಾಯದಿಂದ ಪಾರಾಗಿದ್ದಾನೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸೂಕ್ತ ಪರಿಹಾರಕ್ಕೆ ಕಾರು ಮಾಲೀಕರು ಒತ್ತಾಯಿಸಿದ್ದಾರೆ.
Kshetra Samachara
27/04/2026 04:35 pm
LOADING...