ವಿರಾಜಪೇಟೆ: ಕೊಡಗು ಜಿಲ್ಲೆಯ ವಿರಾಜಪೇಟೆ ಸಮೀಪದ ಅಂಬಟ್ಟಿ ಗ್ರಾಮದ ಮನೆಯೊಂದರ ಹಿಂಭಾಗದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕೋಳಿ ಮೊಟ್ಟೆಗಳನ್ನು ತಿಂದ ನಂತರ ಸೌದೆಯ ಅಟ್ಟಿಯಲ್ಲಿ ಅವಿತು ಮಲಗಿದ್ದ ನಾಗರಹಾವನ್ನು ಕಂಡು ಮನೆಯವರು ಗಾಬರಿಗೊಂಡರು. ತಕ್ಷಣವೇ ಅವರು 'ಆಟೋ ಸ್ನೇಕ್ ಸತೀಶ್' ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸತೀಶ್, ಸೌದೆಯ ರಾಶಿಯೊಳಗೆ ಅಡಗಿದ್ದ ನಾಗರಹಾವನ್ನು ಯಶಸ್ವಿಯಾಗಿ ಸೆರೆ ಹಿಡಿದರು. ಕೋಳಿ ಮೊಟ್ಟೆ ತಿಂದು ಸೌದೆಯ ಅಟ್ಟಿಯಲ್ಲಿ ಅವಿತು ಮಲಗಿದ್ದ ನಾಗರ ಹಾವನ್ನು 'ಸ್ನೇಕ್ ಸತೀಶ್' ಯಶಸ್ವಿಯಾಗಿ ರಕ್ಷಿಸಿ, ಮಾಕುಟ್ಟ ಅರಣ್ಯಕ್ಕೆ ಬಿಟ್ಟಿದ್ದಾರೆ. ಸತೀಶ್ ಅವರು ಈವರೆಗೆ ಸುಮಾರು 5,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ್ದಾರೆ. ಹಾವುಗಳನ್ನು ರಕ್ಷಿಸುವುದರ ಜೊತೆಗೆ, ಸಾರ್ವಜನಿಕರಿಗೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಅವರು ನಿರಂತರವಾಗಿ ಮಾಡುತ್ತಿದ್ದಾರೆ.
Kshetra Samachara
27/04/2026 04:41 pm
LOADING...