ಚಳ್ಳಕೆರೆ ನಗರದಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು 25ರಿಂದ 30 ವರ್ಷದ ಯುವಕನ ಅನಾಥ ಶವ ಕಳೆದ ಮೂರು ದಿನಗಳ ಹಿಂದೆ ಪತ್ತೆಯಾಗಿತ್ತು. ಸುಮಾರು ಮೂರ್ನಾಲ್ಕು ದಿನಗಳವರೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವವನ್ನು ಇರಿಸಿ ವಾರಸುದಾರಿಗಾಗಿ ಹುಡುಕಾಟ ನಡೆಸಲಾಯಿತು.
ಶವದ ವಾರಸುದಾರರು ಯಾರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡ ಪಾಪಣ್ಣನವರ ಸಹಕಾರದಿಂದ ಶವ ಸಂಸ್ಕಾರ ಮಾಡಲಾಯಿತು.ಇಂತಹ ಹಲವಾರು ಅನಾಥ ಶವಗಳ ಸಂಸ್ಕಾರಕ್ಕೆ ಸಹಕಾರ ನೀಡುವ ಆಮ್ ಆದ್ಮಿ ಪಕ್ಷದ ಪಾಪಣ್ಣನವರ ಸೇವೆಯನ್ನು ಪೊಲೀಸರು ಸ್ಮರಿಸಿದರು. ಈ ಸಂದರ್ಭದಲ್ಲಿ ಎಎಸ್ಐ ವೀರಭದ್ರಪ್ಪ, ಮುಖ್ಯಪೇದೆ ಬಿ.ಡಿ.ಮಂಜಣ್ಣ ಸಿಬ್ಬಂದಿಯಾದ ನಾಗರಾಜ್ ದುರ್ಗೇಶ್ ಮುಂತಾದವರು ಇದ್ದರು...
Kshetra Samachara
27/04/2026 05:19 pm
LOADING...