ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ : ಸಿಡಿಲಿಗೆ 50ಕ್ಕೂ ಹೆಚ್ಚು ಕುರಿ ಬಲಿ: ಕುರಿಗಾಹಿಗಳ ಬದುಕಿಗೆ ಬರಸಿಡಿಲು!

ಯಾದಗಿರಿ : ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಬೂದೂರು ಗ್ರಾಮದಲ್ಲಿ ಸಂಜೆ ಸುರಿದ ಧಾರಾಕಾರ ಮಳೆ ಮತ್ತು ಸಿಡಿಲಿಗೆ ಬಲಿಯಾಗಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಕುರಿಗಾಹಿಗಳ ಪಾಲಿಗೆ ಬರಸಿಡಿಲು ಬಡಿದಂತಾಗಿದೆ.

ಗ್ರಾಮದ ಮಲ್ಲಪ್ಪ, ಆಶಪ್ಪ, ಜಾಲಪ್ಪ, ಮತ್ತು ಹನುಮಂತ ಎಂಬುವರಿಗೆ ಸೇರಿದ ಈ ಕುರಿಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಿಸಲು ಕರೆದೊಯ್ಯಲಾಗಿತ್ತು. ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದಾಗ, ಅನಿರೀಕ್ಷಿತವಾಗಿ ಸಿಡಿಲು ಬಡಿದಿದೆ. ಈ ದುರಂತದಲ್ಲಿ 50ಕ್ಕೂ ಅಧಿಕ ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ತಮ್ಮ ಜೀವನಾಧಾರವಾಗಿದ್ದ ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳ ರೋಧನೆ ಹೇಳತೀರದಾಗಿದೆ. ಘಟನಾ ಸ್ಥಳದಲ್ಲಿ ಮನಕರಗುವ ದೃಶ್ಯ ಕಂಡುಬಂದಿದೆ. ಈ ಘಟನೆ ಗುರುಮಿಠಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Edited By :
PublicNext

PublicNext

28/04/2026 10:29 am

Cinque Terre

8.29 K

Cinque Terre

0