ಮಡಿಕೇರಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿಮ್ಮಿಂದಲೇ ವಿಚಾರ ತಿಳಿಯುತ್ತಿದ್ದು, ನನಗೆ ಯಾವುದೇ ಮಾಹಿತಿ ಇಲ್ಲವೆಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ ಸಚಿವ ಸಂಪುಟ ವಿಸ್ತರಣೆ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಯಾವುದೇ ಮಾಹಿತಿ ಇಲ್ಲ. ನನ್ನ ರಾಜಕೀಯ ಚಾನೆಲ್ ಬಂದ್ ಆಗಿದ್ದು, ಸಂವಿಧಾನ ಚಾನೆಲ್ ಮಾತ್ರ ಓಪನ್ ಇದೆ ಎಂದಷ್ಟೇ ಪ್ರತಿಕ್ರಯಿಸಿದರು.
ಕರ್ಣಾಟಕ ರಾಜ್ಯ ಬ್ಯಾರಿ ಅಕಾಡೆಮಿ ವತಿಯಿಂದ ಕೊಡಗು ಬ್ಯಾರಿ ವೆಲ್ಫೇರ್ ಅಸೋಸಿಯೇಷನ್ ಮುಖಾಂತರ ಬ್ಯಾರಿ ಸಂಸ್ಕೃತಿ, ಪರಂಪರೆಯ ಸಮ್ಮಿಲನ ಕಾರ್ಯಕ್ರಮ ಇಂದು ನಡೆದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದೇನೆ. ಮಡಿಕೇರಿಗೆ ಬರುವುದೆಂದರೆ ನನಗೆ ಸಂತೋಷ. ಅತ್ಯಂತ ಪ್ರೀತಿಯ, ಸಹೋದರತ್ವದ ನಾಡು ಮಡಿಕೇರಿ ಎಂದರು.
PublicNext
28/04/2026 06:11 pm
LOADING...