ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಡಿಕೇರಿ: ಬಿಜೆಪಿಯಿಂದ ದಕ್ಷಿಣ ಭಾರತದ ಬಗ್ಗೆ ತಾರತಮ್ಯ ಧೋರಣೆ - ಎಂ.ಲಕ್ಷ್ಮಣ್

ಮಡಿಕೇರಿ: ಉತ್ತರ ಭಾರತದಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸಲು ಲೋಕಸಭಾ ಕ್ಷೇತ್ರಗಳನ್ನು ಶೇ.50ರಷ್ಟು ಏರಿಸಲು ಹೊರಟಿರುವ ಬಿಜೆಪಿ ಸರ್ಕಾರ, ದಕ್ಷಿಣ ಭಾರತದ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯಾ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದರೆ ಉತ್ತರದಲ್ಲಿ ಜನಸಂಖ್ಯೆ ಶೇ.195ರಷ್ಟು ಏರಿಕೆಯಾಗಿದ್ದರೆ, ದಕ್ಷಿಣದಲ್ಲಿ ಕೇವಲ ಶೇ.135ರಷ್ಟು ಮಾತ್ರ ಆಗುತ್ತದೆ. ಇದರಿಂದ ಉತ್ತರದ ರಾಜ್ಯಗಳಲ್ಲಿ ಸ್ಥಾನ ಹೆಚ್ಚಾಗಿ ಬಿಜೆಪಿಗೆ ಲಾಭವಾಗಲಿದೆ. ದಕ್ಷಿಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂಬ ಸತ್ಯ ಅವರಿಗೆ ಗೊತ್ತು ಎಂದು ಟೀಕಿಸಿದರು.

ಕರ್ನಾಟಕ 5 ಲಕ್ಷ ಕೋಟಿ ರೂ. ತೆರಿಗೆ ನೀಡಿದರೆ ಕೇಂದ್ರ ವಾಪಸ್ ಕೊಡುವುದು ಕೇವಲ 60 ಸಾವಿರ ಕೋಟಿ. ದಕ್ಷಿಣವನ್ನು ನಿರ್ಲಕ್ಷಿಸುವ ಮಸೂದೆಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಲಕ್ಷ್ಮಣ್ ಹೇಳಿದರು.

Edited By : PublicNext Desk
Kshetra Samachara

Kshetra Samachara

28/04/2026 06:28 pm

Cinque Terre

160

Cinque Terre

0