ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಲು ಮೇ 4ರಿಂದ ರೇಷನಿಂಗ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ನೇತ್ರಾವತಿ ನದಿಯ ನೀರಿನ ಒಳಹರಿವು ಈಗಾಗಲೇ ನಿಂತಿದೆ. ಅಲ್ಲದೆ ಬೇಸಿಗೆಯ ಬಿರು ಬಿಸಿಲಿನಿಂದ ನಗರಪಾಲಿಕೆಯ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಈ ಬೇಸಿಗೆಯ ಅಂತ್ಯದವರೆಗೆ ಕುಡಿಯುವ ನೀರು ಪೂರೈಸಲು ನೀರಿನ ರೇಷನಿಂಗ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 4ರಂದು (ಸಮ ದಿನ) ಬೆಂದೂರು ರೇಚಕ ಸ್ಥಾವರದ ಕೋರ್ಟ್‌ವಾರ್ಡ್, ಕಾರ್‌ಸ್ಟ್ರೀಟ್, ಬಾವುಟಗುಡ್ಡೆ ಟ್ಯಾಂಕ್, ಆಕಾಶವಾಣಿ ಟ್ಯಾಂಕ್, ಪದವು ಟ್ಯಾಂಕ್, ಗೋರಿಗುಡ್ಡೆ, ಸೂಟರ್‌ಪೇಟೆ, ಶಿವಭಾಗ್, ಬೆಂದೂರು, ಕದ್ರಿ, ವಾಸ್‌ಲೇನ್, ಬೆಂದೂರು ಲೋಲೆವೆಲ್ ಪ್ರದೇಶಗಳು, ಬೋಳೂರು ಪ್ರದೇಶ, ಪಡೀಲ್ ರೇಚಕ ಸ್ಥಾವರದ ಮಂಗಳಾದೇವಿ, ಅತ್ತಾವರ, ಬಾಬುಗುಡ್ಡೆ, ವೆಲೆನಿಯಾ, ಜೆಪ್ಪಿನಮೊಗರು, ಬಿಕರ್ನಕಟ್ಟೆ ಟ್ಯಾಂಕ್, ಉಲ್ಲಾಸ್ ನಗರ, ಬಜಾಲ್, ತಿರುವೈಲು, ವಾಮಂಜೂರು, ಶಕ್ತಿನಗರ ಟ್ಯಾಂಕ್‌ನ ಕುಂಜತ್ತಬೈಲ್, ಮುಗ್ರೋಡಿ, ಶಕ್ತಿನಗರ, ಸಂಜಯ ನಗರ, ಪ್ರೀತಿ ನಗರ, ಮಂಜಡ್ಕ, ರಾಜೀವ ನಗರ, ಬೋಂದೆಲ್, ಗಾಂಧಿನಗರ, ಶಾಂತಿನಗರ, ಕಾವೂರು, ತುಂಬೆ-ಪಣಂಬೂರು ಡೈರೆಕ್ಟ್ ಲೈನ್‌ನ ಕಂಕನಾಡಿ, ನಾಗುರಿ, ಪಂಪ್‌ವೆಲ್, ಬಲ್ಲೂರುಗುಡ್ಡೆ, ಪಡೀಲ್ ಪ್ರದೇಶಗಳಿಗೆ ನೀರು ಸರಬರಾಜಾಗಲಿದೆ.
ನೀರು ಮೇ 5ರಂದು (ಬೆಸ ದಿನ) ಪಣಂಬೂರು ರೇಚಕ ಸ್ಥಾವರದ ಸುರತ್ಕಲ್ ಎನ್‌ಐಟಿಕೆ, ಮುಕ್ಕ, ಹೊಸಬೆಟ್ಟು, ಕುಳಾಯಿ, ಜನತಾ ಕಾಲನಿ, ಬೈಕಂಪಾಡಿ, ಪಣಂಬೂರು, ಮೀನಕಳಿಯ, ಪಡೀಲ್ ರೇಚಕ ಸ್ಥಾವರದ ಬಜಾಲ್, ಜಲ್ಲಿಗುಡ್ಡೆ, ಎಕ್ಕೂರು, ಮುರ, ಸದಾಶಿವ ನಗರ, ಅಳಪೆ, ಮೇಘನಗರ, ಮಂಜಲಿಕೆ, ಕಂಕನಾಡಿ ರೈಲ್ವೇ ಸ್ಟೇಷನ್ ಪ್ರದೇಶ, ಕುಡುಪು, ಪಾಂಡೇಶ್ವರ, ಸ್ಟೇಟ್‌ಬ್ಯಾಂಕ್, ಗೂಡ್ ಶೆಡ್, ಧಕ್ಕೆ, ಕಣ್ಣೂರು, ನಿಡ್ಡೇಲ್, ಶಿವನಗರ, ಕೊಡಕ್ಕಲ್, ನೂಜಿ, ಸರಿಪಳ್ಳ, ಉಲ್ಲಾಸ್ ನಗರ, ವೀರ ನಗರ, ಶಕ್ತಿನಗರ ಟ್ಯಾಂಕ್‌ನ ಕಂಡೆಟ್ಟು, ಕುಲಶೇಖರ, ಮರೋಳಿ, ಕಕ್ಕಬೆಟ್ಟು, ಸಿಲ್ವರ್‌ಗೇಟ್, ಕೊಂಗೂರು ಮಠ, ಪ್ರಶಾಂತ್ ನಗರ, ತುಂಬೆ-ಪಣಂಬೂರು ಡೈರೆಕ್ಟ್ ಲೈನ್ ಮೂಡಾ ಪಂಪ್ ಹೌಸ್, ಕೊಟ್ಟಾರ ಚೌಕಿ ಪಂಪ್‌ಹೌಸ್, ಕೂಳೂರು ಪಂಪ್‌ಹೌಸ್, ಕಾಪಿಕಾಡ್, ದಡ್ಡಲ್ ಕಾಡ್ ಪ್ರದೇಶ, ಬಂಗ ಕೂಳೂರು ಪ್ರದೇಶಗಳಿಗೆ ನೀರು ಸರಬರಾಜಾಗಲಿದೆ.
ಕಟ್ಟಡ ರಚನೆ, ಇತರ ನಿರ್ಮಾಣ ಕಾಮಗಾರಿಗಳು ಹಾಗೂ ವಾಹನ ತೊಳೆಯುವ ಸರ್ವಿಸ್ ಸೆಂಟರ್ ಗಳ ಜೋಡಣೆಯನ್ನು ಮುಂದಿನ ಸೂಚನೆವರೆಗೆ ಕಡಿತಗೊಳಿಸಲಾಗುವುದು. ಸಾರ್ವಜನಿಕರು ನೀರನ್ನು ಅನವಶ್ಯಕವಾಗಿ ಪೋಲು ಮಾಡುವುದು ಕಂಡು ಬಂದಲ್ಲಿ ಯಾವುದೇ ಸೂಚನೆ ನೀಡದೆ ಜೋಡಣೆ ಕಡಿತಗೊಳಿಸಲಾಗುವುದು ಎಂದು ಮನಪಾ ಆಯುಕ್ತರು ತಿಳಿಸಿದ್ದಾರೆ.
Kshetra Samachara
01/05/2026 10:41 am