ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಟ್ಯಾಂಕರ್-ಬೈಕ್‌ ನಡುವೆ ಭೀಕರ ಅಪಘಾತ- ಯುವಕರಿಬ್ಬರು ಸ್ಥಳದಲ್ಲೇ ಸಾವು

ಮಂಗಳೂರು: ಟ್ಯಾಂಕರ್ ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ಸವಣೂರು ಚಾಪಳ್ಳ ತಿರುವಿನಲ್ಲಿ ನಡೆದಿದೆ.

ಬಂಟ್ವಾಳದ ಮಿತ್ತೂರು ಬೊಳ್ಳರಮಜಲು ನಿವಾಸಿ ಯಜ್ಞೇಶ್(21) ಹಾಗೂ ಆರ್ಲಪದವು ನಿವಾಸಿ ಜಗನ್ (20) ಮೃತ ದುರ್ದೈವಿಗಳು.

ಇಬ್ಬರು ಯುವಕರು ಕೆಲಸದ ನಿಮಿತ್ತ ಅಲಂಗಾರಿಗೆ ತೆರಳಿದ್ದಾಗ ತಿರುವಿನಲ್ಲಿ ನೀರಿನ ಟ್ಯಾಂಕರ್ ಮತ್ತು ಬೈಕ್ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಂದಕಕ್ಕೆ ಟ್ಯಾಂಕರ್ ಕಂದಕಕ್ಕೆ ಉರುಳಿದೆ.

ಜಗನ್ ಪುತ್ತೂರಿನ ಖಾಸಗಿ ಕಾಲೇಜಿನ ಹೋಟೇಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದಾನೆ. ಇತ್ತೀಚಿಗೆ ಇಂಟರ್ನ್‌ಶಿಪ್‌ಗೆ ಆಸ್ಟ್ರೇಲಿಯಾಕ್ಕೆ ತೆರಳಿ ವಾಪಸ್ಸಾಗಿದ್ದನು. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

05/05/2026 11:03 pm

Cinque Terre

17.11 K

Cinque Terre

0