ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಅಡಿಕೆ ತೋಟದಲ್ಲಿ ಕಾಣಿಸಿಕೊಂಡ ಬೆಂಕಿ- ಛಾಯಗ್ರಾಹಕನ ಸಮಯಪ್ರಜ್ಞೆಯಿಂದ ಅಡಿಕೆ ಮರಗಳು ಸೇಫ್

ಬಂಟ್ವಾಳ: ತಾಲೂಕಿನ ಸಜೀಪ ಮೂಡದ ಗ್ರಾಮದ ಕೊಲ್ಯ ಎಂಬಲ್ಲಿ ಅಡಿಕೆ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಮೇ 3ರಂದು ನಸುಕಿನ ವೇಳೆ ಕೊಲ್ಯ ರಸ್ತೆ ಬದಿಯ ಗಿಡಗಳಿಗೆ ಬೆಂಕಿ ಬಿದ್ದಿದೆ. ಬೆಂಕಿಯ ಕೆನ್ನಾಲಿಗೆ ಹತ್ತಿರದ ಅಡಿಕೆ ತೋಟಕ್ಕೂ ಆವರಿಸಿದೆ. ಬೆಂಕಿಯ ಜ್ವಾಲೆ ಅಡಿಕೆ ಮರಗಳನ್ನು ಆವರಿಸಿರುವುದನ್ನು ಕಂಡ ಸ್ಥಳೀಯರು ನಂದಿಸಲು ಪ್ರಯತ್ನಿಸಿದ್ದಾರೆ‌.

ಈ ವೇಳೆ ಕಾರ್ಯಕ್ರಮವೊಂದನ್ನು ಮುಗಿಸಿ ಬರುತ್ತಿದ್ದ ಕೊಲ್ಯ ನಿವಾಸಿ ಛಾಯಗ್ರಾಹಕ ಮನೀಶ್ ಪೂಜಾರಿ ಯವರು ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದ ಟ್ರಾಫಿಕ್ ಎಸ್.ಐ.ಆದರ್ಶ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳಕ್ಕೂ ವಿಚಾರ ತಿಳಿಸಲಾಗಿದೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಪರಿಣಾಮ ಅಡಿಕೆ ಮರಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

Edited By : Vinayak Patil
PublicNext

PublicNext

04/05/2026 03:22 pm

Cinque Terre

14.35 K

Cinque Terre

0