ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಮಸ್ಯೆಗಳ ಸಾಗರ, ಧೂಳಿನ ಆಗರ ಶಿರಸಿ-ಹಾವೇರಿ ರಸ್ತೆ

ಶಿರಸಿ: ಯಪ್ಪೋ ಯಪ್ಪೋ ಯಪ್ಪೋ ಯಾವ ತರ ಧೂಳು, ಇದ್ಯಾವ ತರ ಧೂಳು, ಈ ರೋಡ್‌ನಲ್ಲಿ ಒಂದು ಸಲ ಓಡಾಡಿದ್ರೆ ಸಾಕು ಕೆಮ್ಮು- ಧಮ್ಮು ಎಲ್ಲಾ ಶುರು ಆಗುತ್ತೆ. ಹಾಗಾದ್ರೆ ಇದು ಯಾವ ರೋಡ್ ಅಂತಾ ತೋರಿಸ್ತೀವಿ ನೋಡಿ. ಇದೇ ನಮ್ಮ ಶಿರಸಿಯಿಂದ ಹಾವೇರಿಗೆ ಸಂಪರ್ಕಿಸುವ ಮೇನ್ ಹೈವೇ ಅಲ್ಲ ಸಾರಿ ಸಾರಿ ಇಂಟರ್‌ನ್ಯಾಷನಲ್ ಹೈವೇ.

ಹೌದು ವೀಕ್ಷಕರೇ.. ನೀವು ನೋಡುತ್ತಾ ಇರುವುದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಹಾವೇರಿಗೆ ಹೋಗುವ ರಸ್ತೆ. ಇದು ಯಾವ ರೀತಿ ಹಾಳಾಗಿದೆ ಅಂದರೆ ಈ ರೋಡ್‌ನಲ್ಲಿ ತಗ್ಗು-ಗುಂಡಿಗಳನ್ನ ಬಿಟ್ಟರೆ ಬೇರೆ ಏನು ಇಲ್ಲ ಅನ್ನೋ ರೀತಿ ರೋಡಿನ ಪರಿಸ್ಥಿತಿ ಆಗಿದೆ. ಆಗ ಈ ರಸ್ತೆಯನ್ನ ನಾವು ಸರಿಮಾಡುತ್ತೇವೆ ಅಂತಾ ಆಗ ಮುಂದೆ ಬಂದ ಆಗಿನ ಚುನಾಯಿತ ರಾಜಕಾರಣಿಗಳು ಈಗ ಈ ಬಗ್ಗೆ ಸೈಲೆಂಟಾಗಿದ್ದಾರೆ.

ಸುಮಾರು ೪-೫ ವರ್ಷಗಳ ದೀರ್ಘ ಪ್ರಯತ್ನ, ಹಲವಾರು ದೊಡ್ಡ ದೊಡ್ಡ ಮಷಿನರಿ ಗಾಡಿಗಳ ಕಾರ್ಯಾಚರಣೆ ಇಂದ ಈ ರೋಡನ್ನ ಎಷ್ಟು ಸರಿಪಡಿಸಿದ್ರು ಅಂದರೆ ರೋಡಿನ ಮೇಲೆ ಓಡಾಡಲು ಗಾಡಿಗೆ ೪ ಚಕ್ರ ಸಾಲದೆ ೮ ಚಕ್ರ ಹಾಕಿಕೊಳ್ಳಬೇಕೇನೋ ಅಂತಾ ಅನ್ನಿಸಿಬಿಡುತ್ತಿತ್ತು....

ಈ ಶಿರಸಿ ಹಾವೇರಿ ರಸ್ತೆಯ ದುರಸ್ತಿ ಕಾರ್ಯ ಶುರುಮಾಡಿ ಸುಮಾರು ವರ್ಷಗಳೇ ಕಳೆದವು. ಆದರೆ ಈ ಕಾಮಗಾರಿ ಯಾವಾಗ ಮುಗಿಸುತ್ತಾರೆ ಅಂತಾ ಯಾರಿಗೂ ಗೊತ್ತಿಲ್ಲ. ಚುನಾಯಿತ ರಾಜಕಾರಣಿಗಳಿಗಂತೂ ಇದರ ಬಗ್ಗೆ ಕಿಂಚಿತ್ತೂ ಗಮನ ಇಲ್ಲದಂತಾಗಿದೆ. ಇವರು ಹೇಳೋದು ಒಂದೇ. ನಾವಂತೂ ಅಭಿವೃದ್ಧಿ ಮಾಡಿದ್ದೇವೆ.. ಆದರೆ ನಿಮಗೇನಾದರೂ ಆ ಅಭಿವೃದ್ಧಿ ಕಂಡಿಲ್ಲ ಎಂದರೆ ಹೋಗಿ ಕಣ್ಣು ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎನ್ನುತ್ತಾರೆ.

ಒಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳಿಗೆ ರಸ್ತೆಯ ಅಭಿವೃದ್ಧಿ ಇಷ್ಟೊಂದು ಉದಾಸೀನವಾಗಿ ಕಂಡರೆ ಮುಂದೆ ನಮ್ಮ ಜನರ ಪರಿಸ್ಥಿತಿ ಅದೋಗತಿ ಅಂತಲೇ ಹೇಳಬಹುದು .

ಶಿರಸಿಯಿಂದ ವಿನಯ್ ಮುಂಗ್ರಾಣಿ, ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

02/05/2026 06:23 pm

Cinque Terre

16.81 K

Cinque Terre

1

ಸಂಬಂಧಿತ ಸುದ್ದಿ