ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಸಿದ್ಧತೆ; ಪ್ರಹ್ಲಾದ್ ಜೋಷಿ ಪರಿಶೀಲನೆ

ಚಿತ್ರದುರ್ಗ: ಇದು ಮಧ್ಯ ಕರ್ನಾಟಕದ ಹೆಬ್ಬಾಗಿಲು ಕೋಟೆನಾಡು ಚಿತ್ರದುರ್ಗ. ಇದೇ ಮೇ 9ರಂದು ನಗರದ ಮಾದಾರ ಚೆನ್ನಯ್ಯ ಮಠದ ಹಿಂಭಾಗದ ಬೃಹತ್ ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಹುಟ್ಟು ಹೋರಾಟಗಾರ, ಛಲದಂಕ ಮಲ್ಲ ಬಿ.ಎಸ್.ವೈ, ರಾಜಕಾರಣದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿ.ಎಸ್.ವೈ ಅಭಿಮಾನಿಗಳು ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.

ಇನ್ನೂ ಈ ಕಾರ್ಯಕ್ರಮಕ್ಕೆ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದ್ದು, ಭರದ ತಯಾರಿ ಮಾಡಲಾಗುತ್ತಿದೆ. ಸುಮಾರು 200 ಅಡಿ ಅಗಲ ಹಾಗೂ 1 ಸಾವಿರ ಅಡಿ ಉದ್ದದ ಜರ್ಮನ್ ಪೆಂಡಾಲ್ ನಿರ್ಮಾಣ ಮಾಡುತ್ತಿದ್ದು, ಲಕ್ಷ ಲಕ್ಷ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನೂ ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳಿಗೆ ಬಿಸಿಲಿನ ಝಳ ತಟ್ಟದಿರಲಿ ಎಂದು ಹೈದರಬಾದ್ ನಿಂದ ಮಿಸ್ಟ್ ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ಅಲ್ದೆ ಐದು ಕೌಂಟರ್‌ಗಳಲ್ಲಿ ಊಟದ ವ್ಯವಸ್ಥೆ ಕಲ್ಪಿಸಿದ್ದು ಜೊತೆಗೆ ಕುಡಿಯುವ ನೀರು, ಮಜ್ಜಿಗೆ ಕೂಡಾ ನೀಡಲಾಗುತ್ತಿದ್ದು ಭರ್ಜರಿ ಸಿದ್ದತೆಗಳು ಕೂಡಾ ನಡೆಯುತ್ತಿದೆ.

ಇಂದು ಕಾರ್ಯಕ್ರಮ ಜರುಗಲಿರುವ ಸ್ಥಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡಾ ಭೇಟಿ ನೀಡಿ, ಸಿದ್ಧತಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ್ರು. ಈ ನಡುವೆ ಬಿ.ಎಸ್.ವೈ ಸಾರ್ಥಕ ಬದುಕಿನ ಸಮಾವೇಶಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಕೂಡಾ ಶುಭ ಹಾರೈಸುತ್ತಿದ್ದಾರೆ.

ಒಟ್ಟಾರೇ 50 ವರ್ಷ ರಾಜ್ಯದಲ್ಲಿ ಬಿ.ಜೆ.ಪಿ ಕಟ್ಟಿ ಬೆಳೆಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವ್ರಿಗೆ ಅಭಿಮಾನಿಗಳು ಭರ್ಜರಿ ಸನ್ಮಾನಕ್ಕೆ ರೆಡಿ ಆಗ್ತಿದ್ದಾರೆ.

Edited By : Shivu K
PublicNext

PublicNext

02/05/2026 08:25 pm

Cinque Terre

16.76 K

Cinque Terre

0

ಸಂಬಂಧಿತ ಸುದ್ದಿ