ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಸ್‌ಯೇತರ 30 ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ಗೆಲುವು: ಎಸ್‌ಪಿ ಬಡ್ತಿಗೆ ಹೈಕೋರ್ಟ್ ಆದೇಶ

ಬೆಂಗಳೂರು: ರಾಜ್ಯ ಪೊಲೀಸ್‌ ಸೇವೆಯಲ್ಲಿದ್ದ 30 ಐಪಿಎಸ್‌ಯೇತರ ಅಧಿಕಾರಿಗಳಿಗೆ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ವೃಂದಕ್ಕೆ ಬಡ್ತಿ ನೀಡುವಂತೆ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಮಹತ್ವದ ಆದೇಶ ನೀಡಿದೆ.

ಹಿನ್ನೆಲೆ ಮತ್ತು ನ್ಯಾಯಪೀಠದ ನಿರ್ಧಾರ

ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶವನ್ನು ನೀಡಿದ್ದು, ಎಸ್‌ಪಿ ಹುದ್ದೆಗೆ ಬಡ್ತಿ ಕುರಿತು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್‌ಎಟಿ) 2025ರ ಆಗಸ್ಟ್ 20ರಂದು ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಗೃಹ ಇಲಾಖೆ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿತ್ತು. ನ್ಯಾಯಪೀಠವು ಕೆಎಸ್‌ಎಟಿ ಆದೇಶವನ್ನು ಮಾರ್ಪಾಡುಗೊಳಿಸಿ, ರಾಜ್ಯ ಗೃಹ ಇಲಾಖೆಯ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.

ಬಡ್ತಿ ಪ್ರಕ್ರಿಯೆಗೆ ಸ್ಪಷ್ಟ ನಿರ್ದೇಶನ

ತನ್ನ ಆದೇಶದಲ್ಲಿ, ‘ಕರ್ನಾಟಕ ನಾಗರಿಕ ಸೇವಾ ನಿಯಮ (ಕೆಸಿಎಸ್‌ಆರ್‌) 45ರ ನಿಯಮದಡಿ ಬಡ್ತಿಯನ್ನು ಪರಿಗಣಿಸಬೇಕು’ ಎಂದು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಅಲ್ಲದೆ, ‘ಖಾಲಿ ಇರುವ ಹುದ್ದೆಗಳ ಅಂಶವನ್ನು ನ್ಯಾಯಮಂಡಳಿ ಪರಿಗಣಿಸಬೇಕಿತ್ತು. ಎಸ್‌ಪಿ ಹುದ್ದೆಗಳು ಮತ್ತು ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಹುದ್ದೆಗಳ ಲಭ್ಯತೆಯನ್ನು ಆಧರಿಸಿ, ಗೃಹ ಸಚಿವರ ಅನುಮೋದನೆ ಪಡೆದು ಎರಡು ತಿಂಗಳೊಳಗೆ ಪ್ರತಿವಾದಿಗಳಿಗೆ ಎಸ್‌ಪಿ ಹುದ್ದೆಗೆ ಬಡ್ತಿ ನೀಡುವ ನಿರ್ಧಾರ ಕೈಗೊಳ್ಳಬೇಕು’ ಎಂದು ನ್ಯಾಯಪೀಠವು ಸೂಚಿಸಿದೆ.

Edited By : Vijay Kumar
PublicNext

PublicNext

02/05/2026 10:51 pm

Cinque Terre

3.53 K

Cinque Terre

0

ಸಂಬಂಧಿತ ಸುದ್ದಿ