ಮುಂಬೈ: ಎವೆಲಿನ್ ಶರ್ಮಾ ತಮ್ಮ ವೈವಾಹಿಕ ಜೀವನದ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದು, ಪತಿ ತುಷಾನ್ ಭಿಂಡಿ ಜೊತೆಗಿನ ಐದು ವರ್ಷದ ದಾಂಪತ್ಯಕ್ಕೆ ಅಧಿಕೃತವಾಗಿ ಅಂತ್ಯ ಘೋಷಿಸಿದ್ದಾರೆ. ‘ಯೇ ಜವಾನಿ ಹೈ ದೀವಾನಿ’ ಚಿತ್ರದ ಮೂಲಕ ಜನಪ್ರಿಯತೆ ಪಡೆದ ನಟಿ, ಈ ಮೂಲಕ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ವಿಚ್ಛೇದನದ ಕುರಿತು ಮಾತನಾಡಿದ ಎವೆಲಿನ್, ಇದು ಪರಸ್ಪರ ಒಪ್ಪಿಗೆಯ ನಿರ್ಧಾರ ಎಂದು ಸ್ಪಷ್ಟಪಡಿಸಿದ್ದಾರೆ. “ನಾವು ಬೇರೆ ಹಾದಿ ಹಿಡಿದರೂ, ನಮ್ಮ ಮಕ್ಕಳ ಪಾಲನೆ-ಪೋಷಣೆಯಲ್ಲಿ ಒಟ್ಟಾಗಿ ಜವಾಬ್ದಾರಿ ನಿಭಾಯಿಸುತ್ತೇವೆ” ಎಂದು ತಿಳಿಸಿದ್ದಾರೆ. ಜೊತೆಗೆ, ಈ ಹೊಸ ಅಧ್ಯಾಯವನ್ನು ಸ್ನೇಹ ಮತ್ತು ಪೋಷಕರ ಹೊಣೆಗಾರಿಕೆಯ ಮೇಲೆ ಕಟ್ಟಿಕೊಳ್ಳುತ್ತಿರುವುದಾಗಿ ಹೇಳಿ, ತಮ್ಮ ಖಾಸಗಿತನವನ್ನು ಗೌರವಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
2012ರಲ್ಲಿ ‘From Sydney with Love’ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದ ಎವೆಲಿನ್, ‘Yeh Jawaani Hai Deewani’ ಮೂಲಕ ಖ್ಯಾತಿ ಗಳಿಸಿದರು. ಬಳಿಕ ವಿವಿಧ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2021ರಲ್ಲಿ ವಿವಾಹವಾದ ಈ ಜೋಡಿಗೆ ಇಬ್ಬರು ಮಕ್ಕಳು ಇದ್ದು, ಎವೆಲಿನ್ ಪ್ರಸ್ತುತ ಸಿಡ್ನಿಯಲ್ಲಿ ವಾಸಿಸುತ್ತಿದ್ದಾರೆ.
PublicNext
02/05/2026 05:21 pm
LOADING...