ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ ಹಾಗೂ ಅವರ ಪತ್ನಿ ಡಾ. ಧನ್ಯತಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಿಹಿ ಸುದ್ದಿಯನ್ನು ಅವರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಹೌದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿರುವ ಈ ಜೋಡಿ, "Our universe is expanding" (ನಮ್ಮ ವಿಶ್ವ ವಿಸ್ತರಿಸುತ್ತಿದೆ) ಎಂದು ಬರೆದುಕೊಂಡಿದ್ದಾರೆ. ಈ ಪ್ರಕಟಣೆಯು ಅವರ ಅಭಿಮಾನಿಗಳು ಮತ್ತು ಸಿನೆಮಾ ವಲಯದಲ್ಲಿ ಸಂತಸ ಮೂಡಿಸಿದೆ.
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಫೋಟೋ ಒಂದರಲ್ಲಿ ಡಾ. ಧನ್ಯತಾ ಗರ್ಭಿಣಿಯಾಗಿರುವುದು ಕಂಡುಬಂದಿತ್ತು. ಆದಾಗ್ಯೂ, ದಂಪತಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿರಲಿಲ್ಲ. ಇದೀಗ, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ, ತಮ್ಮ ಸುಂದರ ಕ್ಷಣಗಳ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಡಾಲಿ ಧನಂಜಯ್ ಅವರು ಡಾ. ಧನ್ಯತಾ ಅವರೊಂದಿಗೆ ಕಳೆದ ವರ್ಷ, 2025ರ ಫೆಬ್ರವರಿ 16ರಂದು ಮೈಸೂರಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರ ವಿವಾಹ ಮತ್ತು ಆರತಕ್ಷತೆ ಸಮಾರಂಭದಲ್ಲಿ ಚಲನಚಿತ್ರ ಹಾಗೂ ರಾಜಕೀಯ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಿ ನವದಂಪತಿಗೆ ಶುಭ ಹಾರೈಸಿದ್ದರು.
PublicNext
30/04/2026 04:25 pm
LOADING...