ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಟಾಕ್ಸಿಕ್' ಬಿಡುಗಡೆ ಮತ್ತೊಮ್ಮೆ ಮುಂದೂಡಿಕೆ -ಯಶ್ ಅಭಿಮಾನಿಗಳಿಗೆ ಶಾಕ್ ನೀಡಿತಾ ಚಿತ್ರತಂಡ?

ಬೆಂಗಳೂರು : ಖ್ಯಾತ ನಟ ಯಶ್ ಅವರ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್ ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic: A Fairy Tale for Grown-Ups)ಚಿತ್ರದ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಸಣ್ಣ ನಿರಾಸೆಯಾಗಿದೆ. ಜೂನ್ 4ಕ್ಕೆ ನಿಗದಿಯಾಗಿದ್ದ ಚಿತ್ರದ ಬಿಡುಗಡೆಯನ್ನು ಅಧಿಕೃತವಾಗಿ ಮುಂದೂಡಲಾಗಿದ್ದು, ಇದು ಸಿನಿಮಾ ಪ್ರೇಮಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಹಿಂದೆ ಮಾರ್ಚ್ 19 ರಂದು ತೆರೆಕಾಣಬೇಕಿದ್ದ ಈ ಸಿನಿಮಾ, ಈಗ ಎರಡನೇ ಬಾರಿಗೆ ವಿಳಂಬವಾಗುತ್ತಿದೆ. ಆದರೆ, ಈ ವಿಳಂಬಕ್ಕೆ ಚಿತ್ರದ ಮೇಲಿರುವ ನಿರೀಕ್ಷೆಯ ಕೊರತೆಯಾಗಲಿ ಅಥವಾ ತಾಂತ್ರಿಕ ದೋಷವಾಗಲಿ ಕಾರಣವಲ್ಲ; ಬದಲಿಗೆ ಚಿತ್ರಕ್ಕೆ ದೊರೆಯುತ್ತಿರುವ ಜಾಗತಿಕ ಮಟ್ಟದ ಅಭೂತಪೂರ್ವ ಆಸಕ್ತಿ ಇದಕ್ಕೆ ಮೂಲ ಕಾರಣ.

ಇತ್ತೀಚೆಗೆ ನಡೆದ 'ಸಿನಿಮಾಕಾನ್' ಕಾರ್ಯಕ್ರಮದಲ್ಲಿ 'ಟಾಕ್ಸಿಕ್' ಚಿತ್ರದ ಕುರಿತು ಅಂತರಾಷ್ಟ್ರೀಯ ವಿತರಕರು ತೋರಿದ ಆಸಕ್ತಿ ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯಶ್, "ಟಾಕ್ಸಿಕ್ ಕೇವಲ ಒಂದು ಸಿನಿಮಾವಲ್ಲ, ಇದು ನನ್ನ ಪಾಲಿನ ಒಂದು ಪ್ಯಾಶನ್ ಪ್ರಾಜೆಕ್ಟ್. ಈ ಚಿತ್ರಕ್ಕೆ ಒಂದು ಭವ್ಯವಾದ ಮತ್ತು ಸರಿಯಾದ ವೇದಿಕೆ ಸಿಗಬೇಕಿದೆ," ಎಂದು ತಿಳಿಸಿದ್ದಾರೆ. ಚಿತ್ರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಜಾಗತಿಕ ಮಟ್ಟದಲ್ಲಿ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಲು ತಂಡವು ವಿದೇಶಿ ವಿತರಣಾ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಎಂದಿದ್ದಾರೆ ಒಟ್ಟಾರೆಯಾಗಿ, ಈ ವಿಳಂಬವು 'ಟಾಕ್ಸಿಕ್' ಚಿತ್ರವನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ತಂತ್ರದ ಭಾಗವಾಗಿದೆ. ಶೀಘ್ರದಲ್ಲೇ ಚಿತ್ರತಂಡವು ಹೊಸ ಮತ್ತು ಅಂತಿಮ ಬಿಡುಗಡೆ ದಿನಾಂಕವನ್ನು ಘೋಷಿಸಲಿದೆ. ಅಲ್ಲಿಯವರೆಗೆ ಯಶ್ ಅಭಿಮಾನಿಗಳು ಈ ಜಾಗತಿಕ ಸಾಹಸಕ್ಕಾಗಿ ಕಾಯಲೇಬೇಕಿದೆ.

Edited By : Nagaraj Tulugeri
PublicNext

PublicNext

29/04/2026 09:29 pm

Cinque Terre

10.35 K

Cinque Terre

0