ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಯಿ ಪಲ್ಲವಿಗೆ ಹಿಂದಿ ಬರಲ್ವಾ? ವೈರಲ್ ವಿಡಿಯೋ ನೋಡಿ ಟ್ರೋಲಿಗರು ಹೇಳಿದ್ದೇನು?

ಮುಂಬೈ : ಮುಂಬೈನಲ್ಲಿ ನಡೆದ ಏಕ್ ದಿನ್ ಕಿ ಮೆಹಫಿಲ್ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಬಹುಭಾಷಾ ನಟಿ ಸಾಯಿ ಪಲ್ಲವಿ ಅವರು ಕೇಂದ್ರ ಬಿಂದುವಾಗಿದ್ದರು. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ತಮ್ಮ ಏಕ್ ದಿನ್ ಸಿನಿಮಾದ ಪ್ರಚಾರಕ್ಕಾಗಿ ಆಗಮಿಸಿದ್ದ ಅವರು, ವೇದಿಕೆಯ ಮೇಲೆ ಹಿಂದಿ ಮಾತನಾಡಲು ತುಸು ಕಷ್ಟಪಟ್ಟಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮದಲ್ಲಿ ಅತಿಥಿಗಳು ಮತ್ತು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲು ಮುಂದಾದ ಸಾಯಿ ಪಲ್ಲವಿ, ಹಿಂದಿ ಭಾಷೆಯನ್ನು ಸರಾಗವಾಗಿ ಬಳಸಲು ಸಾಧ್ಯವಾಗದೆ ತಡಬಡಾಯಿಸಿದರು. "ನನ್ನ ಹಿಂದಿ ಜ್ಞಾನ ಅಷ್ಟೊಂದು ಚೆನ್ನಾಗಿಲ್ಲ" ಎಂದು ವೇದಿಕೆಯ ಮೇಲೆಯೇ ಮುಕ್ತವಾಗಿ ಒಪ್ಪಿಕೊಳ್ಳುವ ಮೂಲಕ ತಮ್ಮ ಪ್ರಾಮಾಣಿಕತೆ ಮೆರೆದರು. ಆದರೂ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗಿತ್ತಿದೆ.

ರಾಮಾಯಣ' ಚಿತ್ರ ಮುಖ್ಯವಾಗಿ ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ ರಾಮಾಯಣ

ಚಿತ್ರದಲ್ಲಿ ಸಾಯಿ ಪಲ್ಲವಿ 'ಸೀತಾ ಮಾತೆ'ಯ ಪಾತ್ರ ಮಾಡುತ್ತಿರುವುದನ್ನು ಉಲ್ಲೇಖಿಸಿ ಟೀಕೆಗಳು ಕೇಳಿಬರುತ್ತಿವೆ. ಕನಿಷ್ಠ ಮಟ್ಟದ ಹಿಂದಿ ಸಂಭಾಷಣೆ ನಡೆಸಲು ಬಾರದವರು, ರಾಮಾಯಣದಂತಹ ಮಹಾಕಾವ್ಯದ ಪಾತ್ರಕ್ಕೆ ಹೇಗೆ ನ್ಯಾಯ ಒದಗಿಸುತ್ತಾರೆ?" ಎಂದು ಪ್ರಶ್ನಿಸಿದ್ದಾರೆ. ಭಾಷೆಯ ಮೇಲೆ ಹಿಡಿತವಿಲ್ಲದಿದ್ದರೆ ಪಾತ್ರದ ಗಾಂಭೀರ್ಯ ಮತ್ತು ಭಾವನೆಗಳು ಪ್ರೇಕ್ಷಕರಿಗೆ ಸರಿಯಾಗಿ ತಲುಪುವುದಿಲ್ಲ ಎಂಬುದು ಹಲವರ ಅಭಿಪ್ರಾಯ.

ಟೀಕೆಗಳ ನಡುವೆಯೂ ಸಾಯಿ ಪಲ್ಲವಿ ಪರವಾಗಿ ದೊಡ್ಡ ಅಭಿಮಾನಿ ಬಳಗ ಧ್ವನಿ ಎತ್ತಿದರೆ . ತಮಗೆ ಭಾಷೆ ಸರಿಯಾಗಿ ಬರಲ್ಲ ಎಂದು ಎಲ್ಲರ ಮುಂದೆ ಒಪ್ಪಿಕೊಂಡ ಅವರ ಧೈರ್ಯವನ್ನು ಅನೇಕರು ಮೆಚ್ಚಿದ್ದಾರೆ. ಅವರು ಅದ್ಭುತ ನಟಿ. ಪಾತ್ರಕ್ಕಾಗಿ ಅವರು ಭಾಷೆಯನ್ನು ಕಲಿಯಬಲ್ಲರು ಮತ್ತು ಡಬ್ಬಿಂಗ್ ಮೂಲಕ ಅದನ್ನು ಸರಿಪಡಿಸಬಹುದು" ಎಂದು ಅಭಿಮಾನಿಗಳು ಬೆಂಬಲ ಸೂಚಿಸಿದ್ದಾರೆ.

Edited By : Abhishek Kamoji
PublicNext

PublicNext

29/04/2026 05:42 pm

Cinque Terre

21.74 K

Cinque Terre

0