ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ:ಆಟೋ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದಶಾಸಕ ಭೀಮಣ್ಣ ನಾಯ್ಕ

ಶಿರಸಿ: ಬಹುದಿನಗಳ ಬೇಡಿಕೆಯಾದ ನಗರದ ಕೇಂದ್ರ ಬಸ್‌ ನಿಲ್ದಾಣದ ಹತ್ತಿರವಿರುವ ಆಟೋ ರಿಕ್ಷಾ ನಿಲ್ದಾಣ ಕಾಮಗಾರಿಗೆ ಮಂಗಳವಾರ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು.

ಹಾಲುಣಿ ನೀಡಿ ಮಾತನಾಡಿದ ಶಾಸಕರು ಸುಮಾರು ದಿನಗಳಿಂದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪರದಾಡುತ್ತಿದ್ದ ಆಟೋ ಚಾಲಕರಿಗೆ,ಈ ನೂತನ ಕಾಮಗಾರಿಯಿಂದ ಅನುಕೂಲವಾಗಲಿದೆ. ಇದರ ಉಪಯೋಗವನ್ನು ನಗರದ ಆಟೋ ಚಾಲಕರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಅಲ್ಲದೆ ಆಟೋ ಚಾಲಕರು ನಗರದ ಸಾರಿಗೆ ವ್ಯವಸ್ಥೆಯ ಬೆನ್ನೆಲುಬು. ಬಿಸಿಲು, ಮಳೆ ಎನ್ನದೇ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಿರುವ ಆಟೋ ಚಾಲಕರಿಗೆ ಈ ಒಂದು ಕಾಮಗಾರಿಯ ಅವಶ್ಯಕತೆ ಇತ್ತು. ಈ ಬೇಡಿಕೆಯನ್ನು ಇಂದು ಈಡೇರಿಸಲಾಗಿದೆ ಎಂದರು.

ನಂತರ ಆಟೋರಿಕ್ಷಾ ನಿಲ್ದಾಣದ ಕಾಮಗಾರಿಯು ಅತ್ಯಂತ ಗುಣಮಟ್ಟದಿಂದ ಕೂಡಿರಬೇಕು ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ನಗರಸಭೆ ಮಾಜಿ ಸದಸ್ಯರು, ಸಾರಿಗೆ ಇಲಾಖೆಯ ಅಧಿಕಾರಿಗಳು, ಆಟೋ ಚಾಲಕರ ಸಂಘದ ಪ್ರಮುಖರು, ಕಾಂಗ್ರೆಸ್ ಮುಖಂಡರು ಮುಖಂಡರು ಹಾಗೂ ನೂರಾರು ಆಟೋ ಚಾಲಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

05/05/2026 11:38 am

Cinque Terre

22.76 K

Cinque Terre

0

ಸಂಬಂಧಿತ ಸುದ್ದಿ